
ಅಡುಗೆ ಮನೆ: ಬೇಕಾಗುವ ಸಾಮಾಗ್ರಿ: 1 ಮೂಲಂಗಿ, 1 ಕ್ಯಾರೆಟ್, ಅರ್ಧ ಕಟ್ಟು ಮೆಂತೆಸೊಪ್ಪು, ಸ್ವಲ್ಪ ಜೀರಿಗೆ, 2 ಕಪ್ ಗೋಧಿಹಿಟ್ಟು ಸ್ವಲ್ಪ ನೀರು.
ಮಾಡುವ ವಿಧಾನ: ಕ್ಯಾರೆಟ್, ಮೂಲಂಗಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ತುರಿಯಿರಿ, ಒಂದು ಪಾತ್ರೆಗೆ ಗೋಧಿಹಿಟ್ಟು ಹಾಕಿ ಅದಕ್ಕೆ ತುರಿದ ಕ್ಯಾರೆಟ್, ಮೂಲಂಗಿ, ದಂಟು ಬೇರ್ಪಡಿಸಿಕೊಂಡ ಮೆಂತೆಸೊಪ್ಪಿನ ಎಲೆ, 1 ಟೀ ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಇದನ್ನು ಅರ್ಧ ಗಂಟೆ ಇಡುವ ಅಗತ್ಯವಿಲ್ಲ, ಚಪಾತಿ ಲಟ್ಟಿಸಿ ಕಾಯಿಸಿ, ರುಚಿಯಾದ ತರಕಾರಿ ಚಪಾತಿ ಸವಿಯಲು ಸಿದ್ಧವಾಗುತ್ತದೆ.