ಜೊಯಿಡಾ: ತಾಲೂಕಿನ ಚಾಪೋಲಿ ಬಳಿ ಜೆಲ್ಲಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡು ಲಾರಿ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ದತ್ತಾ ಪ್ರಭು ಎನ್ನುವವರ ಲಾರಿ ಇದಾಗಿದ್ದು, ಲಾರಿಯ ಮುಂದಿನ ಭಾಗ ಅರ್ಧದಷ್ಟು ಸುಟ್ಟಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.