• first
  second
  third
  previous arrow
  next arrow
 • ಅರಣ್ಯವಾಸಿಗಳ ಮೇಲೆ ಸರಕಾರ ಪ್ರತಿರೋಧ ನೀತಿಗೆ ಅವಕಾಶವಿಲ್ಲ: ನಾಗಮೋಹನದಾಸ್

  300x250 AD

  ಶಿರಸಿ: ಅರಣ್ಯವಾಸಿ ಭೂಮಿ ಹಕ್ಕಿಗೆ ಸರಕಾರ ಪರಿಹಾರ ಒದಗಿಸಬೇಕು. ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಅನಿವಾರ್ಯ. ಅರಣ್ಯವಾಸಿಗಳ ವಿರುದ್ಧ ಸರಕಾರ ಪ್ರತಿರೋಧ ನೀತಿ ಅನುಸರಿಸಬಾರದೆಂದು ಸುಪ್ರೀಂ ಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ಅವರು ಹೇಳಿದರು.

  ಅವರು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ‘ಅರಣ್ಯ ಭೂಮಿ ಹಕ್ಕು ; ಸುಪ್ರೀಂ ಕೋರ್ಟ್ ವಿಚಾರಣೆ’ ರಾಜ್ಯಮಟ್ಟದ ಚಿಂತನ ಕೂಟದಲ್ಲಿ ವಿಶೇಷ ಆಮಂತ್ರಿತರಾಗಿ ಮಾತನಾಡಿದರು.

  ಅರಣ್ಯವಾಸಿಗಳ ಬದುಕು ಅರಣ್ಯದೊಂದಿಗೆ ಹೊಂದಿಕೊಂಡಿದೆ. ಅರಣ್ಯವಾಸಿಗಳನ್ನ ಅರಣ್ಯ ಭೂಮಿಯಿಂದ ಬೇರ್ಪಡಿಸುವುದು ಸಕಾರಣವಲ್ಲ. ಅರಣ್ಯ ಭೂಮಿ ಅರಣ್ಯವಾಸಿಗಳಿಗೆ ಒದಗಿಸದೇ ಇದ್ದಲ್ಲಿ ಸಾಮಾಜಿಕ ಕಾಂತ್ರಿಗೆ ನಾಂದಿ ಆಗುವುದು. ಅರಣ್ಯವಾಸಿಗಳ ದೌರ್ಜನ್ಯ ಯಾವ ಧರ್ಮ, ಕಾನೂನು ಕೂಡ ಒಪ್ಪುವುದಿಲ್ಲ. ಇತಿಹಾಸದ ಪ್ರತಿಯೊಂದು ಯುದ್ದವು ಭೂಮಿಗಾಗಿ ಜರಗುತ್ತಿದ್ದು, ಭೂಮಿ ಹಕ್ಕಿನ ಸಮಸ್ಯೆ ಬಗೆಹರಿದಾಗಲೇ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಸ್ಯೆ ಬಗೆಹರಿಯುವರೆಗೂ ಹೋರಾಟ ಸಹ ನಿಲ್ಲುವುದಿಲ್ಲ ಎಂದು ಹೇಳಿದರು.

  ದಾಖಲೆಯ ಸಾಕ್ಷ್ಯ ಅವಶ್ಯಕತೆ ಇಲ್ಲ :
  ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ನಿರ್ದಿಷ್ಟ ದಾಖಲೆ ಒತ್ತಾಯಿಸುವಿಕೆಗೆ ಅವಕಾಶವಿಲ್ಲ. ದಾಖಲೆ ಒತ್ತಾಯಿಸುವುದು ಕಾನೂನು ಬಾಹಿರ ಕೃತ್ಯ. ಸರಕಾರ ಈ ನೀತಿಯನ್ನು ಬದಲಿಸಬೇಕು ಅರಣ್ಯವಾಸಿಗಳ ಮೇಲೆ ಜರುಗಲಿರುವ ದೌರ್ಜನ್ಯ, ಕಾನೂನು ಬಾಹಿರ ಕೃತ್ಯಕ್ಕೆ ಹೋರಾಟ ಅನಿವಾರ್ಯ. ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗೆ ಹೋರಾಟದಲ್ಲಿಯೇ ಅತೀಕ್ರಮಣದಾರರ ಉಸಿರು ಇದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ ಅವರು ಹೇಳಿದರು.

  ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ಜಿ ಎಮ್ ಶೆಟ್ಟಿ, ಶಿರಸಿ ವಕೀಲ ಸಂಘದ ಅಧ್ಯಕ್ಷ ಈರೇಶ್, ಸಿದ್ಧಾಪುರ ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮುಂತಾದವರು ಮಾತನಾಡಿದರು.

  ವೇದಿಕೆಯ ಮೇಲೆ ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಶಿರಸಿ ಅಧ್ಯಕ್ಷ ಲಕ್ಷಣ ಮಾಳ್ಳಕ್ಕನವರ, ರಾಮು ಗೌಳಿ, ಎಸ್.ಎಮ್ ಪಾಟೀಲ್, ಸಾಸನ್ ದಾಡೇಲಿ, ರಿಜವಾನ್, ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಶಬ್ಬೀರ್ ಚಪಾತಿ, ಶೇಖಯ್ಯ ಹಿರೇಮಠ, ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್ ಮುಂತಾದವರು ಉಪಸ್ಥಿತರಿದ್ದರು.

  300x250 AD

  ಸ್ವಾಗತ ಮತ್ತು ಪ್ರಸ್ತಾವನೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಾಲಚಂದ್ರ ಶೆಟ್ಟಿ ಅವರು ಮಾಡಿದರು.

  ರಾಜ್ಯಮಟ್ಟದ ಅರಣ್ಯ ಭೂಮಿ ಹಕ್ಕು ಕಾನೂನು ಕಾರ್ಯಗಾರ ತೆಗೆದುಕೊಂಡಂತಹ ನಿರ್ಣಯಗಳು :
  ೧. ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಈ ಹಿಂದೆ ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾದ ಅರಣ್ಯ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸುತ್ತೇವೆ ಎಂದು ಸಲ್ಲಿಸಿದ ಪ್ರಮಾಣ ಪತ್ರಕ್ಕೆ ಹೇಚ್ಚುವರಿ ಮತ್ತು ತಿದ್ದುಪಡಿ ಅರಣ್ಯವಾಸಿಗಳಪರ ಪ್ರಮಾಣ ಪತ್ರ ತುರ್ತಾಗಿ ಸಲ್ಲಿಸುವುದು.

  ೨. ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ, ನಿರ್ದಿಷ್ಟ ದಾಖಲೆಗಳಿಗೆ ಅಗ್ರಹಿಸುವುದನ್ನು ಕೈ ಬಿಡುವುದು.

  ೩. ರಾಜ್ಯ ಸರಕಾರ ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟನಲ್ಲಿ ಪ್ರಬಲ ಕಾನೂನು ತಜ್ಞರ ತಂಡ ರಚಿಸುವುದು.

  Share This
  300x250 AD
  300x250 AD
  300x250 AD
  Back to top