• Slide
    Slide
    Slide
    previous arrow
    next arrow
  • ಕಾನ್ಸ್‌ಟೇಬಲ್ ಮನೆಗೆ ನುಗ್ಗಿದ ಕಳ್ಳರು: ಒಡವೆ ದೋಚಿ ಪರಾರಿ

    300x250 AD

    ಭಟ್ಕಳ: ಸಾಗರ ರಸ್ತೆಯ‌ ಪೋಲೀಸ್ ವಸತಿ ಗೃಹದಲ್ಲಿರುವ ಕಾನ್ಸ್‌ಟೇಬಲ್  ಮನೆಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಒಡವೆ ದೋಚಿದ ಘಟನೆ ನಡೆದಿದೆ.

    ಕಾನ್ಸ್‌ಟೇಬಲ್ ಸಂಗಮೇಶ್ ಕರ್ತವ್ಯಕ್ಕೆ ತೆರಳಿದ ಬಳಿಕ  ಈ ಘಟನೆ ಸಂಭವಿಸಿದ್ದು ಭಟ್ಕಳ ಜನತೆಯಲ್ಲಿ ಆತಂಕ ಹುಟ್ಟಿಸಿದೆ.

    ಘಟನೆಯ ವಿವರ: ರಾತ್ರಿ ಸುಮಾರು 12.15ರ ಸಮಯಕ್ಕೆ ಬಾಗಿಲು ಬಡಿದ ಶಬ್ದ ಕೇಳಿ ಗಂಡ ಮನೆಗೆ ಬಂದಿರಬಹುದೆಂದು ಭಾವಿಸಿದ ಪತ್ನಿ ನಾಗರತ್ನ ಬಾಗಿಲು ತೆಗೆದ ತಕ್ಷಣ ಚಾಕು ಹಿಡಿದ ಇಬ್ಬರು ಮುಸುಕುಧಾರಿಗಳು ಮನೆಯೊಳಗೆ ಪ್ರವೇಶಿಸಿದರು. ಕೂಗದಂತೆ ಅವಳನ್ನು ಬೆದರಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ,  ಕಿವಿಯೋಲೆ, ಉಂಗುರ ಸೇರಿ ಅಂದಾಜು 2 ರಿಂದ 2.5 ಲಕ್ಷ ಬೆಲೆಬಾಳುವ ಆಭರಣ ದೋಚಿ ಪರಾರಿಯಾಗಿದ್ದಾರೆ.

    ಮಂಕಿ ಕ್ಯಾಪ್, ಕೈಗೆ ಗ್ಲೌಸ್,ಕಾಲಿಗೆ ಸಾಕ್ಸ್ ಧರಿಸಿದ್ದ ಅವರಲ್ಲಿ ಓರ್ವ ಕನ್ನಡದಲ್ಲೇ ಮಾತನಾಡುತ್ತಿದ್ದ ಎಂದು ಕಾನ್ಸ್‌ಟೇಬಲ್ ಪತ್ನಿ ನಾಗರತ್ನಾ ಹೇಳಿಕೆ ನೀಡಿದ್ದಾಳೆ.

    300x250 AD

    ಘಟನೆ ನಡೆದ ಸ್ಥಳಕ್ಕೆ ಕಾರವಾರದ ಶ್ವಾನದಳ ಆಗಮಿಸಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.

    .

    Share This
    300x250 AD
    300x250 AD
    300x250 AD
    Leaderboard Ad
    Back to top