• first
    second
    third
    previous arrow
    next arrow
  • ಬಸವರಾಜ್ ಗುರಿಕಾರ ಪರ ಶಾರದಾ ಶೆಟ್ಟಿ ಮತಯಾಚನೆ

    300x250 AD

    ಕುಮಟಾ: ಬಸವರಾಜ ಗುರಿಕಾರ ಅವರು ಉತ್ತಮವಾದ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಅನುಭವ ಹೊಂದಿದವರಾಗಿದ್ದಾರೆ. ಅಲ್ಲದೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಹಲವಾರು ಶಿಕ್ಷಕರ ಸಮಸ್ಯೆಗಳಿಗೆ ಇತಿಶ್ರೀ ಹಾಡಿದ್ದಾರೆ. ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತವನ್ನು ನೀಡಿ, ಬದಲಾವಣೆ ತರುವುದರ ಮೂಲಕ ಅಭಿವೃದ್ಧಿ ಸಹಕರಿಸಬೇಕಾಗಿದೆ ಎಂದು ಶಾರದಾ ಶೆಟ್ಟಿ ವಿನಂತಿಸಿಕೊಂಡರು.

    ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಪರವಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಮಹಾತ್ಮಾಗಾಂಧಿ ಪ್ರೌಢಾಶಾಲೆ ಚಿತ್ರಿಗಿ, ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ ಮಾಸೂರು, ತೌಹೀದ್ ಹೈಸ್ಕೂಲ್ ಗುಡ್ ಕಾಗಾಲ, ಲೋಕನಾಥ ಪ್ರೌಢಶಾಲೆ ಗುಡ್‌ಕಾಗಾಲ್ ಶಿಕ್ಷಕರರನ್ನು ಭೇಟಿಯಾಗಿ ಪ್ರಚಾರ ನಡೆಸಿದರು.

    300x250 AD

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ವಾರೇಕರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಜಾಫರ್ ಸಾಬ್, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಹನುಮಂತ ಪಟಗಾರ, ಕಾಗಾಲ ಪಂಚಾಯತ್ ಅಧ್ಯಕ್ಷ ಶಶಿಕಾಂತ ನಾಯ್ಕ, ಸದಸ್ಯ ಪ್ರಶಾಂತ್ ಶೆಟ್ಟಿ, ಮುಖಂಡ ಐ.ಟಿ.ನಾಯ್ಕ ಮುಂತಾದವರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Back to top