ಕುಮಟಾ: ಭಾರತೀಯ ಸೈನ್ಯದಲ್ಲಿದ್ದು ಅದೆಷ್ಟೊ ಸೈನಿಕರು ವೀರಮರಣವನ್ನು ಹೊಂದಿದ್ದಾರೆ ಒಬ್ಬೊಬ್ಬ ಸೈನಿಕನು ದೇಶದ ಗಡಿಯನ್ನು ಕಾಯುವಲ್ಲಿ ತನ್ನದೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಅಂತಹ ಸೈನಿಕರ ನೆನಪು ಮಾಡಿಕೊಳ್ಳುವದು ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವದು ನಮ್ಮದೆ ಕರ್ತವ್ಯವಾಗಿದೆ.
ಆದ್ದರಿಂದ ಯುವಾ ಬ್ರಿಗೇಡ್ ಕುಮಟಾ ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದು ಪ್ರತಿಯೊಬ್ಬರು ಈ ವರ್ಷದ ವಿಶ್ವ ಪರಿಸರ ದಿನಕ್ಕೆ ತಮ್ಮ ತಮ್ಮ ಮನೆಯಲ್ಲಿ ಗಿಡವನ್ನು ನೆಟ್ಟು ಆ ಗಿಡಕ್ಕೆ ನಿಮಗಿಷ್ಟವಾದ ಸೈನಿಕರ ಹೆಸರನ್ನು ಒಂದು ಫಲಕದಲ್ಲಿ ಬರೆದು ಆ ಗಿಡಕ್ಕೆ ಹಾಕಿ ನಮಗೆ ಆ ಗಿಡದ ಜೊತೆ ಸೆಲ್ಫಿ ತೆಗೆದು ಕಳುಹಿಸಿಕೊಡುವಂತೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಈ ಪ್ರಯತ್ನಕ್ಕೆ ಜೊತೆಯಾದವರಿಗೆ ಯುವ ಬ್ರಿಗೇಡ್ ಅಭಿನಂದನಾ ಪಾತ್ರ ನೀಡಲಿದ್ದು ಗಿಡವನ್ನು ನೆಡುವ ಫೋಟೋ,ಸೈನಿಕನ ಹೆಸರಿನ ನಾಮಫಲಕ ಹಾಕಿದಾಗ ತೆಗೆದ ಫೋಟೊ,ಗಿಡದ ಜೊತೆಗಿನ ಸೆಲ್ಪಿ ಹಾಗೂ ಅಭಿನಂದನಾ ಪತ್ರ ಕಳುಹಿಸಲು ತಮ್ಮ ವಿಳಾಸವನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕಳುಹಿಸಲು ಕೋರಿದೆ.
ಯುವಾ ಬ್ರಿಗೇಡ್ ಕುಮಟ ವಾಟ್ಸಪ್ ಸಂಖ್ಯೆ
9686314120
9900979537