ಜೊಯಿಡಾ: ತಾಲೂಕಿನ ಹೋಲಿಫೆಮಿಲಿ ಕಾನ್ವೆಂಟ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ತೃತೀಯ ಬಂದ ವಿದ್ಯಾರ್ಥಿ ಅಕ್ಷಯ ದೇಸಾಯಿಗೆ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶಾಂತಾ, ಮಕ್ಕಳಿಗೆ ಆಂತರಿಕ ಪ್ರೇರಣೆ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಇಂದು ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನಿಸುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಅಭಿನಂದನೀಯ ಎಂದರು.
ಕಸಾಪ ತಾಲೂಕಾ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ಗುರುಗಳ ಮಾರ್ಗದರ್ಶನ ಜೊತೆಗೆ ಪಾಲಕರು ಜವಾಬ್ದಾರಿ ಅರಿತು ತಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನ ಹರಿಸಿದರೆ ಯಶಸ್ಸು ಖಂಡಿತ. ವಿದ್ಯಾರ್ಥಿಗೆ ಸನ್ಮಾನಿಸುವ ಕಾರ್ಯಕ್ರಮ ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಮುಂದಿನ ದಿನದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಸನ್ಮಾನಕ್ಕೆ ಪಾತ್ರರಾಗಿ, ನಿಮಗೆಲ್ಲರಿಗೂ ಸನ್ಮಾನಿಸುವ ಸದಾವಕಾಶ ನಮ್ಮ ಸಾಹಿತ್ಯ ಪರಿಷತ್ತಿಗೆ ದೊರೆಯುವಂತಾಗಲಿ ಎಂದರು.
ಕಸಾಪ ಕಾರ್ಯದರ್ಶಿ ಭಾಸ್ಕರ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಪುರಸ್ಕಾರ ಪ್ರತಿವರ್ಷವೂ ನಿಮ್ಮ ಶಾಲೆಯಲ್ಲಿ ನಡೆಯುವಂತಾಗಬೇಕು, ನೀವೆಲ್ಲರೂ ಸತ್ಕಾರಕ್ಕೆ ಅರ್ಹರಾಗುವಂತೆ ಸಾಧನೆ ಮಾಡಿ ಎಂದು ಹಾರೈಸಿದರು.
ಕಸಾಪ ಸದಸ್ಯ ಎ.ಆರ್.ಗೌಡ ವಂದಿಸಿದರು. ವೇದಿಕೆಯಲ್ಲಿ ಹೋಲಿ ಫ್ಯಾಮಿಲಿ ಚರ್ಚ್ ನ ವ್ಯವಸ್ಥಾಪಕ ಜಿ.ಜಿ.ಮೇಡಮ್, ಸಹಶಿಕ್ಷಕಿ ಸ್ಟೇಲಿ, ಟೋನಿ ಡಿಸೋಜಾ, ಕಸಾಪ ಸದಸ್ಯ ಎ.ಆರ್.ಗೌಡ, ಪಾಂಡುರಂಗ ಗಾವಡಾ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು..