ಮುಂಡಗೋಡ: ಬಸ್ ಚಾಲನೆ ಮಾಡುತ್ತಿದ್ದಾಗಲೇ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಮೈನಳ್ಳಿ ಬಳಿ ನಡೆದಿದೆ.
ಮಲ್ಲಪ್ಪ ಸೋಮಪ್ಪನವರ (45) ಮೃತ ಚಾಲಕ. ಬಸ್ ಚಾಲನೆ ಮಾಡುತ್ತಿರುವಾಗಲೇ ಎದೆ ನೋವು ಕಾಣಸಿಕೊಂಡಿದ್ದ ಕಾರಣ ಬಸ್ ರಸ್ತೆ ಪಕ್ಕಕ್ಕೆ ಹಾಕಿದ್ದರು. ಆದರೆ ಈ ವೇಳೆ ಹಠಾತ್ ಆಗಿ ಮೃತಪಟ್ಟಿದ್ದಾರೆ. ಪ್ರಯಾಣಿಕರ ಜೀವ ಉಳಿಸುವ ಮೂಲಕ ಮಲ್ಲಪ್ಪ ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.