ಶಿರಸಿ: ತಾಲೂಕಿನ ಮರಗುಂಡಿ ಗ್ರಾಮದ ಖ್ಯಾತ ವೈದ್ಯರು, ಸಮಾಜ ಸೇವಕರು ಹಾಗೂ ಹಿರಿಯರಾದ ಬಿ.ಬಿ. ನಾಯ್ಕ ಅವರು ನಿಧನ ಹೊಂದಿದ್ದಾರೆ.
ಬಿ.ಬಿ. ನಾಯ್ಕ ಅವರು ಕೊರ್ಲಕಟ್ಟಾ ಭಾಗದಲ್ಲಿನ ಬಡವರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇವರ ನಿಧನದಿಂದ ಸಮಾಜ ತುಂಬಲಾರದ ನಷ್ಟ ಉಂಟಾಗಿದೆ.
ಇವರ ನಿಧನಕ್ಕೆ ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಂಬನಿ ಮಿಡಿದಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ. ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. .
.