ಶಿರಸಿ: ಕೇಂದ್ರ / ರಾಜ್ಯ ನಾಗರಿಕ ಸೇವಾ ಪರೀಕ್ಷೆಗಳು ಗಗನ ಕುಸುಮವಲ್ಲ. ಸೂಕ್ತ ಮಾರ್ಗದರ್ಶನ, ತರಬೇತಿ ಪಡೆದರೆ ಖಂಡಿತ ಯಶಸ್ಸು ಸಾಧ್ಯ ಎನ್ನುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅತ್ಯುನ್ನತ ನಾಗರಿಕ ಸೇವೆಗಳ ಅಧಿಕಾರಿಗಳಾಗಲು ಬಯಸುವ ಜಿಲ್ಲೆಯ ಯುವ ಆಕಾಂಕ್ಷಿಗಳಿಗೆ ಈ ಕುರಿತು ವಿಸ್ತೃತವಾದ ಮಾಹಿತಿಯನ್ನು ನೀಡುವ ಕುರಿತು ಶ್ರೀ ಸ್ವರ್ಣವಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಅಡ್ಮಿನಿಸ್ಟ್ರೇಷನ್ ಮತ್ತು ಮ್ಯಾನೇಜ್‌ಮೆಂಟ್ (ಸ್ವಯಂ) ಶಿರಸಿ ಸಂಸ್ಥೆಯವರು ಜೂ.5 ,ರವಿವಾರದಂದು 10 ಗಂಟೆಗೆ ಶಿರಸಿಯ ಲಯನ್ಸ್ ಶಾಲೆಯಲ್ಲಿ IAS/IPS/KAS ತಳಪಾಯ ತರಬೇತಿಯನ್ನು Foundation Course ನೀಡಲಿದ್ದಾರೆ.
ಅದೇ ವೇಳೆ ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಶಿರಸಿಯ ಹೆಮ್ಮೆಯ ಪುತ್ರರಾದ ಮನೋಜ್ ಆರ್. ಹೆಗಡೆಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಹಿರಿಯ ಮತ್ತು ಅನುಭವಿ ನಾಗರಿಕ ಸೇವಾ ಅಧಿಕಾರಿಗಳಾದ ಸಂತೋಷ ಹೆಗಡೆ, ಕಾರ್ತಿಕ ಹೆಗಡೆಕಟ್ಟೆ, ಸಹನಾ ಬಾಳಕಲ್, ಎಸ್.ಎಮ್.ಹೆಗಡೆ ಹಾಗೂ ಇತರರು ತರಬೇತುದಾರರಾಗಿ ಆಗಮಿಸಲಿದ್ದಾರೆ. ಕಾರಣ ಪಿಯುಸಿ – ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಪದವೀಧರರು, ಸ್ನಾತಕೋತ್ತರ ಪದವೀಧರರು, ಆಸಕ್ತ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.