ಯಲ್ಲಾಪುರ: ತಾಲೂಕಿನ ಕೈಗಾ ಬಂಕಾಪುರ ರಾಜ್ಯ ಹೆದ್ದಾರಿ ಬಾಸಲ್ ಗ್ರಾಮದ ಬಳಿ ಎರಡು ಬೈಕುಗಳ ಮತ್ತೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.
ಬಾಸಲ್ ನಿವಾಸಿ ಒಂದು ಬೈಕ್ ಸವಾರ ನಾಗರಾಜ ಮರಾಠೆ (35) ಹಾಗೂ ಇನ್ನೊಂದು ಬೈಕ್ ಸವಾರ ಬಾಸಲ ನಿವಾಸಿ ಶ್ರೀಪಾದ ಭಟ್ಟ (50) ಗಾಯಗೊಂಡವರಾಗಿದ್ದಾರೆ.
ಗಾಯಾಳುಗಳನ್ನು ಯಲ್ಲಾಪುರದ ತಾಲೂಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.