ದಾಂಡೇಲಿ: ಮರಮುಟ್ಟುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್ ಒಂದು ಮುಂದುಗಡೆ ಹೋಗುತ್ತಿದ್ದ ಕಂಟೇನರಿಗೆ ಡಿಕ್ಕಿ ಹೊಡೆದ ಘಟನೆ ದಾಂಡೇಲಿ ನಗರ ಸಮೀಪದ ಬರ್ಚಿ ರಸ್ತೆಯಲ್ಲಿ ನಡೆದಿದೆ.
ಮರಮುಟ್ಟುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್ ಒಂದು ಎಮ್ಮೆಯನ್ನು ರಕ್ಷಿಸಲು ಹೋಗಿ ಮುಂದುಗಡೆ ಹೋಗುತ್ತಿದ್ದ ಕಂಟೈನರಿಗೆ ಡಿಕ್ಕಿಯಾಗಿದೆ. ಟ್ರಕ್ಕಿನ ಮುಂಭಾಗ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಕಂಟೇನರಿಗೆ ಗುದ್ದಿದ ಮರಮುಟ್ಟು ತುಂಬಿದ್ದ ಟ್ರಕ್
