ಅಂಕೋಲಾ: ತಾಲೂಕಿನ ಶಿರಕುಳಿಯ ಸ.ಹಿ.ಪ್ರಾ ಶಾಲೆಗೆ ಗಣೇಶ ಕುಡ್ತಳಕರ ಹಾಗೂ ಆಶಾ ಕುಡ್ತಳಕರ ದಂಪತಿ 1ರಿಂದ 7ನೇ ವರ್ಗದ ಒಟ್ಟು 64 ವಿದ್ಯಾರ್ಥಿಗಳಿಗೆ ತಲಾ 5 ನೋಟ್‌ಬುಕ್, ಟೈ, ಬೆಲ್ಟ್ ಹಾಗೂ 5 ಪೆನ್ನುಗಳನ್ನು ವಿತರಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಹಾಗೂ ಅವರಿಗೆ ತಮ್ಮ ಸಹಾಯ-ಸಹಕಾರ ಸದಾ ಇರುತ್ತದೆ ಎಂದು ಹಿತ ನುಡಿದರು.
ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿರುವ ಸವಿತಾ ಶೇಡಗೇರಿ ದಾನಿಗಳ ಕೊಡುಗೆಯನ್ನು ಸ್ಮರಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ನಾಗರತ್ನ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಮುಖ್ಯ ಶಿಕ್ಷಕಿ ವತ್ಸಲಾ ಬಂಟ ಸ್ವಾಗತಿಸಿದರು. ಶಿಕ್ಷಕರಾದ ಎಂ.ಕೆ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಲೋಕು ಗೌಡ ವಂದಿಸಿದರು.