ಹಳಿಯಾಳ: ದುರ್ಗಿ ಮತ್ತು ಸಿಂಗರಗಾಂವ್ ನಡುವಿನ ಕಾಡಿನ ರಸ್ತೆಯಲ್ಲಿಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮರವೊಂದು ಅಡ್ಡವಾಗಿ ನಿಂತಿದ್ದು ಯಾವಾಗ ನೆಲಕ್ಕೆ ಒರಗುವುದೋ ಎಂದು ತಿಳಿಯದಂತಾಗಿದೆ.
ಆದರೆ ಶೇ. 45 ರಷ್ಟು ಭೂಮಿಗೆ ಬಾಗಿದ ಈ ಉದ್ದ ಮರವನ್ನು ನೆಟ್ಟಗೆ ನಿಲ್ಲಿಸಿ ಅದರ ಬುಡ ಬಲವಾಗಿಸುವ ಅಥವಾ ಅದನ್ನು ಕಡಿದು ಉರುಳಿಸುವ ಸಂಚಾರಿಗಳಿಗೆ ಆತಂಕ ದೂರ ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಈವರೆಗೂ ಮಾಡುತ್ತಿಲ್ಲ.
ಇವರು ಈ ಕಾಡಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಮ್ ಸ್ಟೇ, ರೆಸಾರ್ಟ್ ನವರಿಗೆ ಮನರಂಜನೆ ನೀಡಲು ಈ ರೀತಿ ಕಲಾಕೃತಿಯಾಗಿ ಇಟ್ಟಿರುವರೇ? ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಅರಣ್ಯ ಇಲಾಖೆ ಕೋಮಾದಲ್ಲಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.