ಯಲ್ಲಾಪುರ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಸೊಳ್ಳೆ ನಿರ್ಮೂಲನೆ ಔಷಧ ಸಿಂಪಡಣೆ ಮಾಡಲಾಯಿತು.
ವಿವಿಧ ಬೀದಿಗಳಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಿ ಚರಂಡಿಗಳಿಗೆ ಮತ್ತು ನೀರು ನಿಲ್ಲುವ ಜಾಗಗಳಲ್ಲಿ ಬೀಚಿಂಗ್ ಪೌಡರ್ ಸಿಂಪರಣೆ ಮಾಡಲಾಯಿತು. ಡೆಂಗೆ ಜ್ವರಕ್ಕೆ ಕಾರಣವಾದ ಸೊಳ್ಳೆಗಳ ನಿಯಂತ್ರಣಕ್ಕೆ ಇಲಾಖೆ ನೀಡಿದ ಡೆಮೋಪಾಸ್ ಔಷಧ ಸಿಂಪಡಿಸಿದರು. ಪ್ರತಿಯೊಬ್ಬರ ಮನೆಯಲ್ಲಿ ನೀರಿನ ಟ್ಯಾಂಕ್ ಗಳನ್ನು ಖಾಲಿಮಾಡಿ ಮತ್ತೆ ಬೇರೆ ನೀರು ತುಂಬುವಂತೆ ತಿಳಿಸಿದರು.
ಗ್ರಾಮಸ್ಥರ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ನೇಮಣ್ಣವರ, ಸಿಬ್ಬಂದಿಗಳಾದ ವೀರಭದ್ರಯ್ಯ ಹಿರೇಮಠ, ನಾಗರಾಜ ಕೋಕಟೆ, ಸುಭಾಷ ನಾಣಪುರ, ರಾಜು ಹೊರಕೇರಿ, ನಾರಾಯಣ ಮುಗಳಿ ಆಶಾ ಕಾರ್ಯಕರ್ತೆ ಪಾರ್ವತಿ ಪಾಟೀಲ ಉಪಸ್ಥಿತರಿದ್ದರು.