• first
  second
  third
  previous arrow
  next arrow
 • ಜೂನ್ 14 ರಂದು ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಜನ ಜಾಗೃತಿ ಸಭೆ

  300x250 AD

  ಶಿರಸಿ: ಕರ್ನಾಟಕ ಸರ್ಕಾರ ಬೇಡ್ತಿ ವರದಾ ನದೀ ಜೋಡಣೆ ಯೋಜನೆಯ ಡಿ.ಪಿ.ಆರ್. ( ವಿವರ ಯೋಜನಾ ವರದಿ) ಸಿದ್ದಪಡಿಸಿ ಮುಂದಿನ ತಯಾರಿಗೆ ಹೆಜ್ಜೆ ಇಡಲು ಮುಂದಾಗಿದೆ ಎಂಬ ಮಾಹಿತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಬೇಡ್ತಿಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ – ವರದಾ ಯೋಜನೆ ವಿರೋಧಿಸಿ ಜೂನ್ 14 ಮಂಗಳವಾರದಂದು ಬೃಹತ್ ಜನ ಜಾಗೃತಿ ಸಭೆ ಆಯೋಜಿಸಿದೆ. ಸಮಿತಿಯ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ನೇತೃತ್ವದಲ್ಲಿ ಈಗಾಗಲೇ ವ್ಯಾಪಕ ತಯಾರಿ ನಡೆದಿದೆ.

  ಜಾಗೃತಿ ಅಭಿಯಾನ: ಜಾಗತಿಕ ಪರಿಸರ ದಿನದಂದು ಬೆಳಿಗ್ಗೆ 10.30 ಕ್ಕೆ ಶಾಲ್ಮಲಾ ನದಿಯ ಸಹಸ್ರಲಿಂಗದಲ್ಲಿ ನದಿ ಪೂಜೆಯೊಂದಿಗೆ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ ಆರಂಭವಾಗಲಿದೆ. ಶಾಲ್ಮಲಾ ನದೀ ತೀರದ ಹಳ್ಳಿಗಳ ಜನರು ಆಗಮಿಸಿ ಹೋರಾಟದ ಸಂಕಲ್ಪ ಮಾಡಲಿದ್ದಾರೆ. ಜೂನ್ 6 ರಂದು ಸಂಜೆ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ವನವಾಸೀ ಬಂಧುಗಳ ಸಭೆಯಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಪರಿಸರ ಜಾಗೃತಿಗೆ ಕರೆ ನೀಡಲಿದ್ದಾರೆ.
  ಜೂ. 7 ರಂದು ಯಲ್ಲಾಪುರದಲ್ಲಿ ನಂದೊಳ್ಳಿ, ಚಂದಗುಳಿ ಮುಂತಾದ ಹಳ್ಳಿಗಳಲ್ಲಿ ಬೇಡ್ತಿ ಅಭಿಯಾನ ನಡೆಯಲಿದ್ದು ಜೂನ್ 8 ರಂದು ಬೇಡ್ತಿ ಸೇತುವೆಯ ಮೇಲ್ಭಾಗದ ಯಲ್ಲಾಪುರ ಮುಂಡಗೋಡ ತಾಲೂಕುಗಳಿಗೆ ಅಭಿಯಾನದ ಸಂದೇಶ ತಲುಪಲಿದೆ.
  ಜೂನ್ 9 ರಂದು ಹಿತ್ಲಳ್ಳಿ, ಉಮ್ಮಚಗಿ ಕುಂದರಗಿ ಭಾಗದ ಹಳ್ಳಗಳಲ್ಲಿ ಬೇಡ್ತಿ ಅಭಿಯಾನ ನಡೆಯಲಿದ್ದು ನಂತರ ಜೂನ್ 14 ರ ವರೆಗೆ ಸಾಲ್ಕಣಿ, ವಾನಳ್ಳಿ ಹುಲೇಕಲ್ ಹಳ್ಳಿಗಳಲ್ಲಿ ಸದಾಶಿವಳ್ಳಿ ಬಿಸಲಕೊಪ್ಪ, ಇಸಳೂರು ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ.
  ಈಗಾಗಲೇ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಭೈರುಂಭೆ, ಯಲ್ಲಾಪುರ, ಸಾಲ್ಕಣಿ ಗಳಲ್ಲಿ ಭಕ್ತರಿಗೆ ಜೂನ್ 14 ರಂದು ಮಂಚಿಕೇರಿಗೆ ಬನ್ನಿ ಎಂಬ ಆಹ್ವಾನ ನೀಡಿದ್ದಾರೆ.


  ಜೂನ್ 14 ರ ಸಭೆಯ ವಿವರ: ಜೂ.14 ಮಂಗಳವಾರ ಮಧ್ಯಾಹ್ನ 3 ಘಂಟೆಗೆ ಮಂಚಿಕೇರಿ ಸಮಾಜ ಮಂದಿರದಲ್ಲಿ ಬೇಡ್ತಿ ಕಣಿವೆ ಸಂರಕ್ಷಣಾ ಸಭೆ ನಡೆಯಲಿದೆ. ಪರಮ ಪೂಜ್ಯ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಈಗಾಲೇ ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಬಾರ ಇವರನ್ನು ಆಹ್ವಾನಿಸಲಾಗಿದೆ. ಪರಿಸರ ವಿಜ್ಞಾನಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಹಕಾರಿ ಕ್ಷೇತ್ರ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರು ಆಗಮಿಸಲಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

  300x250 AD


  ಜಿಲ್ಲೆಯ ರೈತರು, ಪರಿಸರ ಆಸಕ್ತರು, ನಾಗರಿಕರು ಜೂನ್ 14ರ ಬೇಡ್ತಿ ಶಾಲ್ಮಲಾ ಪಟ್ಟಣದ ಹೊಳೆ, ಕಣಿವೆ ಉಳಿಸಿ ಸಭೆಗೆ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

  Share This
  300x250 AD
  300x250 AD
  300x250 AD
  Back to top