ಶಿರಸಿ: ಕಾನಸೂರು-ಹಾಲ್ಕಣಿ-ಹಾರ್ಸಿಕಟ್ಟಾ ಮಾರ್ಗಕ್ಕೆ ಬಸ್ ಸಂಚಾರ ಪ್ರಾರಂಭಿಸುವಂತೆ ಒತ್ತಾಯಿಸಿ ಹಿರೇಕೈ ಭಾಗದ ಗ್ರಾಮಸ್ಥರು ಶುಕ್ರವಾರ ಶಿರಸಿ ವಿಭಾಗೀಯ ನಿಯಂತ್ರಾಣಿಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಿರೇಕೈ ಭಾಗದಿಂದ ದಿನನಿತ್ಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 8 ಕಿಮಿ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಗುಡ್ಡಗಾಡು ಪ್ರದೇಶವಾದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಭಯದಿಂದಲೆ ಶಾಲೆಗೆ ಕಳುಹಿಸುತ್ತಿದ್ದಾರೆ.
ಆದ್ದರಿಂದ ಕಾನಸೂರು ಹಾಲ್ಕಣಿ ಹಾರ್ಸಿಕಟ್ಟಾ ಮಾರ್ಗಕ್ಕೆ ಬಸ್ ಸಂಚಾರವನ್ನು ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಹಸ್ರಗೋಡ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ನಾಯ್ಕ ಸ್ಥಳಿಯರಾದ ಹರಿಶ ಕೀಲಾರ, ರಾಮಾನಾಯ್ಕ,ರಮೇಶ್ ನಾಯ್ಕ,ಮುಂಜುನಾಥ ಗೌಡ , ನಾರಾಯಣ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು