ಯಲ್ಲಾಪುರ: ಸಚಿವ ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಹಾಗೂ ಪಂಡಿತ ಜನರಲ್ ಆಸ್ಪತ್ರೆ ಶಿರಸಿ,ಐಎಂಎ ಬ್ಲಡ್ ಬ್ಯಾಂಕ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರ 65 ನೇ ಜನ್ಮದಿನದ ಅಂಗವಾಗಿ ‘ರಕ್ತದಾನ ಹಾಗೂ ನೇತ್ರದಾನ ನೊಂದಣಿ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ. ಜೂ. 4 ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವರಾಮ ಹೆಬ್ಬಾರ್ ಜನ್ಮದಿನೋತ್ಸವ ಪ್ರಯುಕ್ತ ‘ರಕ್ತದಾನ ಹಾಗೂ ನೇತ್ರದಾನ ನೊಂದಣಿ ಶಿಬಿರ’
