ಯಲ್ಲಾಪುರ: ಬಸ್ ತಂಗುದಾಣ ಇತ್ಯಾದಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆನ್ನುವ ಪ್ರಜ್ಞೆ ಸಾರ್ವಜನಿಕರಲ್ಲಿ ಬಂದಾಗ ಮಾತ್ರ ಅದರ ನಿರ್ವಹಣೆ ಸರಿಯಾಗಿರಲು ಸಾಧ್ಯ.ಎನ್ನುವುದಕ್ಕೆ ನಿದರ್ಶನ ಎನ್ನುವಂತೆ “ವೀ ಕೇರ್” ಎನ್ನುವ ಯುವಕರ ತಂಡ ಶ್ರಮದಾನದ ಮೂಲಕ ಸಾರ್ವಜನಿಕರ ಗಮನಸೆಳೆದಿದೆ.
ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಬಿದ್ರಳ್ಳಿ ಬಸ್ ನಿಲ್ದಾಣ ಸಂಪೂರ್ಣ ಗಿಡಗಂಟಿಗಳಿಂದ ಆವರಿಸಿ,ಹಾಳು ಸುರಿಯುತಿತ್ತು.ಈಬಗ್ಗೆ ಭಾಸ್ಕರ ಸಿದ್ದಿ ನೇತೃತ್ವ ವೀ ಕೇರ್ ತಂಡ ಶುಕ್ರವಾರ ಶ್ರಮದಾನದ ಮೂಲಕ ಬಸ್ ತಂಗುದಾಣದ ಅಸ್ಥಿತ್ವ ತೋರುವಂತೆ ಮಾಡಿರುವುದು ಸಾಮಾಜಿಕ ಕಳಕಳಿಗೊಂದು ಉದಾಹರಣೆ ಯಾಗಿದೆ.
ಶ್ರಮದಾನದ ಮೂಲಕ ಗಮನಸೆಳೆದ ‘ವೀ ಕೇರ್’ ತಂಡ
