ಕುಮಟಾ: ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸಾಧನಾ ನಾಯ್ಕ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಅನಿಲ್ ಜಿ.ಮೂಡಬಿದ್ರಿ ಬಂಗಾರದ ಪದಕ ಪ್ರಶಸ್ತಿ ಪಡೆದಿದ್ದಾರೆ. ಅವರ ಸಾಧನೆಗಾಗಿ ಪ್ರಾಂಶುಪಾಲರಾದ ಪ್ರೊ.ವಿಜಯಾ ಡಿ.ನಾಯ್ಕ ಹಾಗೂ ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
ಸಾಧನಾ ನಾಯ್ಕ್ ಗೆ ಬಂಗಾರ ಪದಕ
