ಯಲ್ಲಾಪುರ:: ಇಳಿಜಾರಿನಲ್ಲಿ ಬೈಕ್ ಒಂದರ ಬ್ರೇಕ್ ಕೇಬಲ್ ಕಟ್ ಆಗಿ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡ ಸವಾರ ಪಾದಚಾರಿಗೆ ಡಿಕ್ಕಿ ಹೊಡೆದು, ನಂತರ ರಸ್ತೆ ಪಕ್ಕದ ರೇಲಿಂಗ್‌ಗೆ ಡಿಕ್ಕಿ ಹೊಡೆದು ಸಹ ಸವಾರ ಸಾವನಪ್ಪಿರುವ ಘಟನೆ ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63ರ ಕೋರ್ಟ್ ರಸ್ತೆಯ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಸಹ ಸವಾರ ಕಿರವತ್ತಿ ನಿವಾಸಿ ಸಿ.ಬಿ ಗುಡದೂರು(64) ತೀವೃ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಿರವತ್ತಿ ನಿವಾಸಿ ಬೈಕ್ ಸವಾರ ರಾಜಾರಾಮ ಯಾದವ(30) ತೀವ್ರ ಗಾಯಗೊಂಡಿದ್ದು, ಪಾದಚಾರಿ ಭೀಮಸಿ ವಾಲ್ಮಿಕಿ(62) ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.