ಯಲ್ಲಾಪುರ: ಎರಡು ಲಾರಿಗಳ ಮಧ್ಯ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಅಳ್ನಾವರ ತಾಳಗುಪ್ಪ ರಾಜ್ಯ ಹೆದ್ದಾರಿ ಯಲ್ಲಾಪುರ ತಾಲೂಕು ವ್ಯಾಪ್ತಿಯ ಬೇಡ್ತಿ ಸೇತುವೆ ಅಂಚಿನಲ್ಲಿ ಸಂಭವಿಸಿದೆ.
ಯಲ್ಲಾಪುರದಿಂದ ಶಿರಸಿ ಕಡೆಗೆ ಬೆಲ್ಲ ತುಂಬಿಸಿಕೊಂಡು ಹೊರಟಿದ್ದ ಲಾರಿ ಎದುರಿನಿಂದ ಅಕೇಶಿಯ ಪೋಲ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಫೋಲ್ಸ್ ತುಂಬಿದ್ದ ಲಾರಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಎರಡು ಲಾರಿ ಚಾಲಕ ಕ್ಲೀನರ್ ಗಳಾದ ಅಹ್ಮದ್ ಅಬ್ಬಾಸ್ ಅಲಿ(36), ರವಿ(38), ಷಣ್ಮುಕ (36) ಹಾಗೂ ಮಾಲತೇಶ ಮೈಲಾರಿ(38) ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಯಲ್ಲಾಪುರದ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.