ಶಿರಸಿ: ಗೋವಾ ರಾಜ್ಯದ ಲೆಜಿಬಿ ಕಾಟೇಜ್‌ನಲ್ಲಿ ನಡೆದ ಮಿಸ್ಟರ್ ಎಂಡ್ ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಇಂಡಿಯಾ ಬ್ಯೂಟಿ ಪ್ರೆಸೆಂಟ್ ಕಾಂಪಿಟೇಶನಲ್ಲಿ ತಾಲೂಕಿನ ಕುಳವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡಿಗೇರಿ ಗ್ರಾಮದ ರಶ್ಮಿ ಹೆಗಡೆ ಮಿಸೆಸ್ ವಿಭಾಗದಲ್ಲಿ ರತ್ನ ಖಚಿತವಾದ ರೆಪ್ಲಿಕಾ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 60 ಮಹಿಳೆಯರು ಪಾಲ್ಗೊಂಡಿದ್ದರು. ಅಂತಿಮವಾಗಿ 16 ಮಹಿಳೆಯರು ಫೈನಲ್ ಹಂತಕ್ಕೆ ಬಂದಿದ್ದರು. ರಶ್ಮಿಯವರ ಪ್ರತಿಭೆ ಮತ್ತು ಬೆಲ್ಲಿ ಡಾನ್ಸ್ ಗೆ ಮೆಚ್ಚಿದ ನಿರ್ಣಾಯಕರು ಅಂತಿಮವಾಗಿ ರೆಪ್ಲಿಕಾ ಕಿರೀಟವನ್ನು ರಶ್ಮಿಯವರ ಮುಡಿಗೇರಿಸಿದ್ದಾರೆ. ರಶ್ಮಿಯವರು ಕೃಷಿ ಕುಟುಂಬದಿಂದ ಬಂದವರು. ಮೈಸೂರಿನ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮುಗಿಸಿರುವ ಅವರು ಸೆಲಿಬ್ರೆಟಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.