
ಶಿರಸಿ: ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ದೊಡ್ನಳ್ಳಿಯ ಚಿನ್ನಾಪುರ ಕೆರೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ 5.ಲಕ್ಷ ರೂ ಪರಿಹಾರ ಧನವನ್ನು ಶಿರಸಿ-ಸಿದ್ದಾಪುರ ಶಾಸಕ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿ ನೆರವಾಗಿದ್ದಾರೆ.
ಧಾರಾಕಾರ ಮಳೆಯಿಂದ ಹಾನಿಯಾದ ಮತ್ತು ಪ್ರವಾಹದಿಂದ ಉಂಟಾದ ಪ್ರಾಣ ಹಾನಿಗೆ, ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ. ಪ್ರವಾಹದಿಂದ ಮೃತರಾದ ಹುಸುರಿಯ ಗಂಗಾಧರ ಗೌಡ ಅವರ ಪತ್ನಿಗೆ ತಕ್ಷಣ ಸರ್ಕಾರದಿಂದ 5ಲಕ್ಷ ಪರಿಹಾರ ಒದಗಿಸಿದ್ದಾರೆ. ಕಾರ್ಯದ ನಿಮಿತ್ತ ತಾವು ದೂರದಲ್ಲಿದ್ದರೂ ಕೂಡಾ ಆಪ್ತ ಸಹಾಯಕರ ಮೂಲಕ ಅಧಿಕಾರಿಗಳ ತಂಡ ರಚಿಸಿ ತಕ್ಷಣ ಸ್ಪಂದಿಸಿದ್ದಾರೆ.