ಶಿರಸಿ: ತಾಲೂಕಿನ ದೇವನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗಣೇಶ ವಿ. ದಿವೇಕರ್ ಹಾಗೂ ಹಲಸಿನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರವಿ ಪಿ. ಹೆಗಡೆಗೆ ಇಡಿಗಂಟು ಮೊತ್ತದ ಚೆಕ್ ನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಮಾತನಾಡಿದ ದೇವನಳ್ಳಿ ಹಾಗೂ ಹಲಸಿನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ ಗಣೇಶ ವಿ ದಿವೇಕರ್ ಹಾಗೂ ರವಿ ಪಿ ಹೆಗಡೆ ಇವರುಗಳು ತಮ್ಮ ನಿಸ್ವಾರ್ಥ ಸೇವೆಯಿಂದ ಹಾಲು ಸಂಘದಲ್ಲಿ ಅನೇಕ ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ಹೊತ್ತು ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ಮೊದಲೆಲ್ಲಾ ಒಬ್ಬ ಹಾಲು ಸಂಘದ ಕಾರ್ಯದರ್ಶಿ ಸೇವೆಯಿಂದ ನಿವೃತ್ತಿ ಹೊಂದಿದರೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿರಲಿಲ್ಲ ಆದರೆ ಇದೀಗ ನಮ್ಮ ಒಕ್ಕೂಟದ ಕಲ್ಯಾಣ ಸಂಘದಿಂದ ಸಾಧ್ಯವಾದಷ್ಟು ಇಡಿಗಂಟು ಎಂಬ ಯೋಜನೆಯಡಿ ಸಹಾಯ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಉತ್ತರಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಹಲಸಿನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ ಗಣಪತಿ ಹೆಗಡೆ, ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ನರಸಿಂಹ ಎನ್.ಹೆಗಡೆ, ವಿಸ್ತರಾಧಿಕಾರಿಗಳಾದ ಪ್ರಕಾಶ ಕೆ., ದಯಾನಂದ ಎನ್, ವಿನಾಯಕ ಬೇವಿನಕಟ್ಟಿ ಮೌನೇಶ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್,ವಿಸ್ತರಣಾ ಸಮಾಲೋಚಕರುಗಳಾದ ಜಯಂತ ಪಟಗಾರ, ಚಂದನ ಕುಮಾರ ನಾಯ್ಕ, ಅಭಿಷೇಕ ನಾಯ್ಕ, ನಿಖಿಲ್ ನಾಯ್ಕ ಹಾಗೂ ಪ್ರವೀಣ ಬಳ್ಳಾರಿ ಉಪಸ್ಥಿತರಿದ್ದರು.