ಶಿರಸಿ: ಪತ್ರಕರ್ತೆ ಕೃಷ್ಣಿ ಶಿರೂರ ಅವರು ಬರೆದ ‘ಉರಿಬಾನ ಬೆಳದಿಂಗಳು’ ಕೃತಿಯ ಅವಲೋಕನ ಕಾರ್ಯಕ್ರಮ ಜೂ.4 ರಂದು ಸಂಜೆ 4 ಗಂಟೆಗೆ ಇಲ್ಲಿನ ನಯನ ಸಭಾಂಗಣದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆ ಹಾಗೂ ತಾಲ್ಲೂಕು ಘಟಕ, ನಯನ ಫೌಂಡೇಶನ್, ಇನ್ನರವಿಲ್ ಕ್ಲಬ್, ಕನ್ನಡ ಬಳಗ ಐ.ಎಂ.ಎ., ಐ.ಎಂ.ಎ. ಮಹಿಳಾ ವೈದ್ಯರ ಬಳಗ ಇವುಗಳ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ, ಸಂರಕ್ಷಣಾ ಶಾಸ್ತ್ರ ತಜ್ಞ ಡಾ.ಕೇಶವ ಕೊರ್ಸೆ ಕೃತಿ ಪರಿಚಯಿಸಲಿದ್ದಾರೆ.
ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಐ.ಎಂ.ಎ.ಮಹಿಳಾ ವೈದ್ಯರ ಬಳಗದ ಅಧ್ಯಕ್ಷೆ ಡಾ.ಆಶಾ ಪ್ರಭು, ಐ.ಎಂ.ಎ. ಕನ್ನಡ ಬಳಗದ ಅಧ್ಯಕ್ಷ ಡಾ.ಡಿ.ಎಂ.ಹೆಗಡೆ, ನೇತ್ರತಜ್ಞ ಡಾ.ಕೆ.ವಿ.ಶಿವರಾಂ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.