ಶಿರಸಿ: ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಭಾಶಿಯ ಸಮಾಜ ವಿಜ್ಞಾನ ಶಿಕ್ಷಕರಾದ ಶಂಕರ್ ಬಿ ನಾಯ್ಕ್ ಇವರು ತಮ್ಮ ಸುದೀರ್ಘ 37 ವರ್ಷ ಪ್ರಾಥಮಿಕ, ಪ್ರೌಢ ಹಾಗೂ ಬಿ.ಆರ್.ಸಿ.ಗಳಲ್ಲಿ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತಿ ಹೊಂದಿದರು.
ಶಿಕ್ಷಣ ಇಲಾಖೆ ಇವರ ಸೇವೆಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಶಿಕ್ಷಣ ಸೇವಾ ಪ್ರಶಸ್ತಿ, ವೈಜ್ಞಾನಿಕ ಪ್ರೇರಣಾ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.ಇವರಿಂದ ಕಲಿತ ಅನೇಕ ಜನ ಶಿಷ್ಯರು ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ನಿವೃತ್ತಿ ಜೀವನವು ಸುಖವಾಗಿರಲೆಂದು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾರೈಸಿದ್ದಾರೆ.