• first
  second
  third
  previous arrow
  next arrow
 • ಋತುಚಕ್ರದಲ್ಲಿ ಶುಚಿತ್ವದ ಜೊತೆ ಪೌಷ್ಠಿಕ ಆಹಾರವೂ ಅತೀಮುಖ್ಯ: ಡಾ.ಆನಂದ್ ಕುಮಾರ್

  300x250 AD

  ಕಾರವಾರ:ತಾಲೂಕಿನ ಕದ್ರಾ ಗ್ರಾಮದ ಕೆಪಿಸಿಎಲ್ ಆಡಿಟೋರಿಯಂನಲ್ಲಿ ನಡೆದ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಕಾರವಾರ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದಕುಮಾರ ಬಾಲಪ್ಪನವರ ಉದ್ಘಾಟಿಸಿದರು.

  ನಂತರ ಮಾತನಾಡಿದ ಅವರು, ಉತ್ತಮ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಋತುಚಕ್ರದ ಅವಧಿಯಲ್ಲಿ ಶುಚಿತ್ವದ ಬಗ್ಗೆ ಕಾಳಜಿವಹಿಸಬೇಕು ಎಂದು ಅಭಿಪ್ರಾಯಪಟ್ಟರು.

  ಋತುಚಕ್ರದ ಅವಧಿಯಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಅಶಕ್ತತೆ ಕಾಣಿಸಿಕೊಂಡು ನಿತ್ರಾಣರಾಗುತ್ತಾರೆ. ಹೀಗಾಗಿ ಋತುಚಕ್ರದ ಅವಧಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಜೊತೆಗೆ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

  ಉದ್ಘಾಟನಾ ಕಾರ್ಯಕ್ರಮದ ಬಳಿಕ ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಶೆಟ್ಟಿ ಅವರು ಮಹಿಳೆಯರು ಋತುಚಕ್ರದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ಹಾಗೂ ಹೆಣ್ಣು ಮಕ್ಕಳು ಯೋಗಾಸನವನ್ನು ರೂಢಿಸಿಕೊಂಡಲ್ಲಿ ಆರೋಗ್ಯ ವೃದ್ಧಿಯಾಗುವ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

  300x250 AD

  ಕಾರ್ಯಕ್ರಮದಲ್ಲಿ ಭಾಗವಹಿಸಿದ ಕದ್ರಾ ಕೆಎಚ್‌ಇಪಿ ಶಾಲೆಯ ವಿದ್ಯಾರ್ಥಿಗಳಿಗೆ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ಋತು ಚಕ್ರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕದ್ರಾ ಕೆಎಚ್‌ಇಪಿ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ವಿದ್ಯಾರ್ಥಿಗಳಿಗೆ ಋತು ಚಕ್ರದ ಅರಿವು ಮೂಡಿಸಲು 23 ಬಿಳಿ ಮತ್ತು 5 ಕೆಂಪು ಮಣಿಗಳನ್ನೊಳಗೊಂಡ ಬ್ರಾಸ್‌ಲೈಟ್ ಸರವನ್ನು ವಿಶೇಷವಾಗಿ ನೀಡಲಾಯಿತು.

  ಸ್ವಚ್ಛ ಭಾರತ ಮಿಷನ್‌ನ ಮಾನವ ಸಂಪನ್ಮೂಲ ಸಮಾಲೋಚಕ ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕೆಪಿಸಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಶ್ರೀಧರ ಕೋಡಿ, ಕೆಎಚ್‌ಇಪಿ ಹೈಸ್ಕೂಲ್‌ನ ಮುಖ್ಯಾಧ್ಯಾಪಕ ಎಮ್.ಎನ್.ಘಟಕಾಂಬಳೆ, ಕದ್ರಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಬಾನಾ ಮುಲ್ಲಾ, ಸ್ವಚ್ಛ ಭಾರತ ಮಿಷನ್‌ನ ನೈರ್ಮಲ್ಯ ಮತ್ತು ಶುಚಿತ್ವ ಸಮಾಲೋಚಕ ಗೋಪಾಲಕೃಷ್ಣ ಹುಲಸ್ವಾರ್ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top