ಕಾರವಾರ: ಕರ್ತವ್ಯವೇ ದೇವರೆಂದು ತನ್ನ ಸೇವಾವಧಿಯುದ್ಧಕ್ಕೂ ಸರಳತೆ, ಕರ್ತವ್ಯ ನಿಷ್ಠೆಯ ಮೂಲಕ ಮಾದರಿ ವ್ಯಕ್ತಿಯಾದ ತಿಪ್ಪಣ್ಣನಾಯಕ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಮೂಲತಃ ಮೊಗಟಾ ಗ್ರಾಮದ ಇವರು ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಗೆ ಸೇರಿ ಶಿರಸಿ, ಅಂಕೋಲಾ, ಕುಮಟಾ, ಈಗ ಮಂಗಳೂರಿನ ಕದ್ರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ತಮ್ಮ ಸೇವಾವಧಿಯಲ್ಲಿ 2 ಬಂಗಾರದ ಪದಕಗಳನ್ನು ಇವರು ಪಡೆದಿದ್ದು ಇವರ ಸಾರ್ಥಕ ಸೇವೆಗೆ ಹಲವು ಗೌರವಗಳು ಸನ್ಮಾನಗಳು ಅರಸಿಕೊಂಡು ಬಂದಿವೆ.
ತನ್ನ ಸೇವೆ ಸಮಾಜಕ್ಕೆ ದೊರಕಬೇಕು. ಕಷ್ಟದಲ್ಲಿದ್ದ ಪ್ರತಿಯೊಬ್ಬರಿಗೂ ಸಹಕರಿಸಬೇಕೆಂಬ ಹೃದಯ ವೈಶಾಲ್ಯತೆ ಹೊಂದಿದ ಪ್ರಾಮಾಣಿಕ ಅಧಿಕಾರಿ ಕದ್ರಿಯ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿ ಕರ್ತವ್ಯ ನಿರ್ವಹಿಸುತ್ತಾ ಮೇ 31ರಂದು ನಿವೃತ್ತಿ ಹೊಂದಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಇಲಾಖಾ ಅಧಿಕಾರಿಗಳು, ಸಹೋದ್ಯೋಗಿಗಳು ಆಶಿಸಿದ್ದಾರೆ.