• first
  second
  third
  previous arrow
  next arrow
 • ಪ್ರಿಯಕರನಿಂದಲೇ ಪ್ರೇಯಸಿಯ ಕಿಡ್ನಾಪ್: ದೂರು ದಾಖಲು

  300x250 AD

  ಕುಮಟಾ: ಪ್ರಿಯಕರನೇ ಪ್ರೇಯಸಿಯ ಕಿಡ್ನಾಪ್ ಮಾಡಿರುವ ಘಟನೆ ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಶಿರಸಿ ತಾಲೂಕಿನ ಹುಲೇಕಲ್ ಗ್ರಾಮದ ಕಾಮಾಕ್ಷಿ ಪೈ ಎನ್ನುವ ಯುವತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು , ತಾಲೂಕಿನ ಕೋಡ್ಕಣಿ ಗ್ರಾಮದ ಸುಬ್ರಹ್ಮಣ್ಯ ಭಂಡಾರಿ ಎಂಬಾತನ ಮೇಲೆ ದೂರು ದಾಖಲಾಗಿದೆ.

  300x250 AD

  ಕಾಮಾಕ್ಷಿ ಪೈ ಹಾಗೂ ಸುಬ್ರಹ್ಮಣ್ಯ ಕೆಲ ದಿನಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಯುವತಿ ಕಾಮಾಕ್ಷಿ ಕೋಡ್ಕಣಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧರೋರ್ವನ ಮೇಲೆ ಸುಬ್ರಹ್ಮಣ್ಯ ಹಲ್ಲೆ ಮಾಡಿ ಯುವತಿಯನ್ನ ಕಿಡ್ನಾಪ್ ಮಾಡಿಕೊಂಡು ತೆರಳಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಯುವತಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

  Share This
  300x250 AD
  300x250 AD
  300x250 AD
  Back to top