ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿಯ ಸರ್ವೋದಯ ಪ್ರೌಢಶಾಲೆಗೆ ಧಾತ್ರಿ ಫೌಂಡೇಶನ್ ಮೈಸೂರು ರವರು ಉಚಿತವಾಗಿ ಪೀಠೋಪಕರಣ ನೀಡುವ ಕಾರ್ಯಕ್ರಮವನ್ನು ಜೂ. 3 ಶುಕ್ರವಾರ ಮಧ್ಯಾಹ್ನ 3. 30ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಧಾತ್ರಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ವಿ ಶ್ರೀನಿವಾಸ ಭಟ್ಟ ಯಲ್ಲಾಪುರ ಪೀಠೋಪಕರಣಗಳನ್ನು ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ ಶಂಕರ ಭಟ್ಟ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆದರ್ಶ ಸೇವಾ ಸಹಕಾರಿಸಂಘದ ಅಧ್ಯಕ್ಷ ನಾಗೇಂದ್ರ ಹೆಗಡೆ ಕೋಣೆಮನೆ, ನಿವೃತ್ತ ಉಪನ್ಯಾಸಕ ಎಮ್ ಎನ್ ಹೆಗಡೆ ಹಳವಳ್ಳಿ, ಶಿಕ್ಷಕ ವಿನೋದ ಭಟ್ಟ, ಆರ್ ಎ ಭಟ್ಟ, ತೋಟ್ಮನೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿನ ಎಸ್.ಎಸ್.ಎಲ್.ಸಿ ಯ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಪುರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.