ಯಲ್ಲಾಪುರ: ಅಂಚೆ ಇಲಾಖೆಯಲ್ಲಿ ಮೂವತ್ತೇಳು ವರ್ಷಗಳ ಕಾಲ ಗ್ರಾಮೀಣ ಅಂಚೆ ಸೇವಕರಾಗಿ ಸೇವೆ ಸಲ್ಲಿಸಿದ ಪಟ್ಟಣದ ಕಾಳಮ್ಮಾ ನಗರದ ದತ್ತಾತ್ರಯ ಗಜಾನನ ಭಟ್ಟ ಅವರಿಗೆ ಗುರುವಾರ ಟಿಳಕಚೌಕಬಳಿ ಇರುವ ಅಂಚೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಅಂಚೆ ಇಲಾಖೆಯಲ್ಲಿ ದಕ್ಷತೆ,ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಎಲ್ಲರ ಪ್ರೀತ್ಯಾದಾರಗಳಿಗೆ ಪಾತ್ರರಾಗಿ “ಪೋಸ್ಟ್ ದತ್ತಣ್ಣ” ಎಂದೇ ಜನಪ್ರಿಯರಾಗಿದ್ದಾರೆ.ತಾಲೂಕಿನ ಹುತ್ಕಂಡದಲ್ಲಿ ಹದಿನೈದುವರ್ಷ ಹಾಗೂ ಪಟ್ಟಣದ ಅಂಚೆ ಕಛೇರಿಯಲ್ಲಿ 22 ವರ್ಷ ಸೇವೆ ಸಲ್ಲಿಸುವ ಮೂಲಕ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ಅಂಚೆ ಇಲಾಖೆಯ ದಾಂಡೇಲಿ ಉಪವಿಭಾಗದ ಅಂಚೆ ನಿರೀಕ್ಷಕ ರಾಯಲ್ ಭಾರ್ತಿ ದತ್ತಾತ್ರಯ ಭಟ್ಟ ದಂಪತಿಗಳನ್ನು ಗೌರವಿಸಿ,ನಿವೃತ್ತಿ ಜೀವನ ಯಶಸ್ಸಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಉಪ ಅಂಚೆ ವ್ಯವಸ್ಥಾಪಕ ಎಸ್.ವಿ.ಗಾಂವ್ಕಾರ ಅವರಿಗೆ ಮಂಚಿಕೇರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಗೌರವಿಸಿ ಬಿಳ್ಕೋಡಲಾಯಿತು.
ಅಂಚೆಕಚೇರಿಯ ಅಂಚೆ ವ್ಯವಸ್ಥಾಪಕಿ ಜ್ಯೋತಿ ಬಳಿಗಾರ,ಹಾಗೂ ಅಂಚೆ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.