• Slide
    Slide
    Slide
    previous arrow
    next arrow
  • ಜೂ.15ಕ್ಕೆ ನಾಣಿಕಟ್ಟಾದಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’ ಕಾರ್ಯಕ್ರಮ

    300x250 AD

    ಸಿದ್ದಾಪುರ: ದಿ.ಗಣೇಶ್ ಗಣಪತಿ ಹೆಗಡೆ ಸೂರನ್ ಇವರ ಸವಿ‌ನೆನಪಿನಲ್ಲಿ ನಟರಾಜ್ ಹೆಗಡೆ‌ ಹಾಗೂ‌ ಗೆಳೆಯರ ಬಳಗದವರ ಸಂಯೋಜನೆಯಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’ ಎಂಬ ಕಾರ್ಯಕ್ರಮವನ್ನು ಜೂನ್ 15,ಬುಧವಾರದಂದು ಆಯೋಜಿಸಲಾಗಿದೆ.

    ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಸಂಜೆ 6.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ‌ದ ಪ್ರಸಿದ್ಧ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ.

    ತದನಂತರ ಯಕ್ಷಗಾನ‌ ಹಿಮ್ಮೇಳದಲ್ಲಿ ರಾಘವೇಂದ್ರ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ‌ ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ ಭಾಗವತಿಕೆಯಲ್ಲಿ ಉಪಸ್ಥಿತರಿದ್ದು,ಮದ್ದಲೆ ವಾದಕರಾಗಿ ಶಂಕರ ಭಾಗವತ ಯಲ್ಲಾಪುರ ಹಾಗೂ ಎನ್.ಜಿ.ಹೆಗಡೆ ಯಲ್ಲಾಪುರ ಆಗಮಿಸಲಿದ್ದಾರೆ.ಚಂಡೆ ವಾದನದಲ್ಲಿ ವಿಘ್ನೇಶ್ವರ ಕೆಸರಕೊಪ್ಪ,ಪ್ರಸನ್ನ ಭಟ್ ಹೆಗ್ಗಾರು ಮನರಂಜಿಸಲಿದ್ದಾರೆ.

    300x250 AD

    ಈ ಸಾಂಸ್ಕೃತಿಕ ಸಂಜೆಯಲ್ಲಿ‌ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಪ್ರಕಟಣೆಯಲ್ಲಿ ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top