ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಮೇ. 31 ಮತ್ತು ಜೂ.1 ರಂದು ಎರಡು ದಿನಗಳ ಕಾಲ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯಉಪಾಧ್ಯಕ್ಷರಾದ ಫ್ರೊ.ಎಮ್.ಜಿ.ಹೆಗಡೆ ಗಡಿಮನೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರ ಉದ್ಘಾಟಿಸಿ ದೀಪದ ಹಾಗೆ ನಾವೂ ಪರೋಪಕಾರಿಗಳಾಗಿ ಬಾಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಳಗಿಬೀಸ್ ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಆರ್.ಜಿ.ಭಟ್ ಅವರು ಇಂದಿನ ಸಮಾಜದಲ್ಲಿ ಶಿಕ್ಷಕರ ಪಾತ್ರ ಎನ್ನುವ ವಿಷಯವಾಗಿ ಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಮೇಜರ್ ರಘುನಂದನ ಹೆಗಡೆ ಮಾತನಾಡಿ ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಶಿಕ್ಷಕರು ಪಡೆದುಕೊಂಡು ತನ್ಮೂಲಕ ಸಂಸ್ಥೆಯ ಯಶಸ್ಸಿಗೆ ಕಾರಣೀಕರ್ತರಾಗಬೇಕೆಂದು ಕರೆ ನೀಡಿದರು.
ಡಾ. ಕೇಶವ ಕೊರ್ಸೆ ಅವರು ಕಾರ್ಯಾಗಾರದ ರೂಪುರೇಷೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಕಾರ್ಯದರ್ಶಿಗಳಾದ ಫ್ರೊ.ಕೆ.ಎನ್.ಹೊಸಮನಿ ಅವರು ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ ಭಟ್, ಶ್ರೀನಿಕೇತನ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಆರ್.ಎಸ್.ಹೆಗಡೆ ಶಿರಸಿ, ಶ್ರೀಮತಿ ವೇದಾ ಹೆಗಡೆ, ಪ್ರಶಾಂತ ಭಟ್, ನಿಶಾಂತ್ ಹೆಗಡೆ ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ವಸಂತ ಭಟ್ ಸ್ವಾಗತಿಸಿದರೆ, ಶಿಕ್ಷಕಿಯಾದ ಶ್ರೀಮತಿ ಕಲಾವತಿ ಶಾಸ್ತ್ರಿ ನಿರೂಪಿಸಿ, ಶ್ರೀಮತಿ ದಿವ್ಯಾ ಶಿರೂರ್ ವಂದಿಸಿದರು. ಎರಡು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳು ಅನೇಕ ವಿಷಯಗಳ ಮೇಲೆ ತಮ್ಮಅನುಭವ ಹಂಚಿಕೊಂಡು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಲ್.ಆಯ್.ಸಿ.ಯ ಮುಖ್ಯಕಾರ್ಯನಿರ್ವಾಹಕರಾದ ಗಣಪತಿ ಎನ್. ಭಟ್ ಅವರು ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವಅಗತ್ಯವಿದೆ ಎಂದರು.ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷರಾದ ಮೇಜರ್ ರಘುನಂದನ ಹೆಗಡೆ, ಸದಸ್ಯರಾದ ಡಾ.ಕೇಶವ ಕೊರ್ಸೆ, ನಿಶಾಂತ್ ಹೆಗಡೆ, ಪ್ರಾಚಾರ್ಯರಾದ ವಸಂತ್ ಭಟ್ ಉಪಸ್ಥಿತರಿದ್ದರು.ಶಿಕ್ಷಕಿಯಾದ ಶ್ರೀಮತಿ ತ್ರಿವೇಣಿ ರಾಯ್ಕರ್ ನಿರೂಪಿಸಿ, ಶಿಕ್ಷಕರಾದ ವಿನಾಯಕ ಭಟ್ ವಂದಿಸಿದರು.ಕಾರ್ಯಾಗಾರದಲ್ಲಿ ಶಾಲೆಯ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.