• first
  second
  third
  previous arrow
  next arrow
 • ಜಿಲ್ಲೆಗೆ ತಟ್ಟಿದ ಪಠ್ಯ ಪರಿಷ್ಕರಣೆ ಕಾವು; ಬರಹ ಕೈಬಿಡಲು ಶಿಕ್ಷಣ ಸಚಿವರಿಗೆ ಪತ್ರ ಬರೆದ ಡಾ.ಅನುಪಮಾ

  300x250 AD

  ಹೊನ್ನಾವರ: ಪಠ್ಯ ಪುಸ್ತಕ ಪರಿಷ್ಕರಣೆಯ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಸಾಹಿತಿಯಿಂದಲೂ ಪಠ್ಯ ಹಿಂತೆಗೆಯುವ ಅಭಿಯಾನ ವ್ಯಾಪಿಸಿದೆ.

  ಜಿಲ್ಲೆಯ ಸಾಹಿತಿ, ಡಾ. ಎಚ್.ಎಸ್. ಅನುಪಮಾ ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶರಿಗೆ ಪತ್ರಮುಖೇನ ಪಠ್ಯ ಪರಿಷ್ಕರಣೆ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

  7 ನೇ ತರಗತಿಯ ಕನ್ನಡ ಭಾಷಾ (ಪ್ರಥಮ) ಪಠ್ಯ ಪುಸ್ತಕದಲ್ಲಿ ‘ಸಾವಿತ್ರಿ ಬಾಯಿ ಪುಲೆ’ (ಗದ್ಯ) ಬರಹ ಹಾಗೂ 7 ನೇ ತರಗತಿಯ ಕನ್ನಡ (ತೃತೀಯ) ಪಠ್ಯದಲ್ಲಿ ‘ನೆನವುದೆನ್ನ ಮನ’ ಅಳವಡಿಸಲು ಅನುಮತಿ ನೀಡಲಾಗಿತ್ತು. ಆದರೆ ಶಿಕ್ಷಣದ ಬಗೆಗಾಗಲಿ, ಕನ್ನಡಿಯಂತಹ ಮಕ್ಕಳ ಭವಿಷ್ಯದ ಬಗೆಗಾಗಲಿ ಕಿಂಚಿತ್ತೂ ಕಾಳಜಿಯಿಲ್ಲದ ದುರುಳರು ಪಠ್ಯಪುಸ್ತಕದಲ್ಲಿ ಕೈಕಾಲಾಡಿಸಿ ಮಾಡಿರುವ ಅವಾಂತರ ತುಂಬ ಬೇಸರ ತಂದಿದೆ. ಈ ಕಾರಣದಿಂದ ನನ್ನ ಬರಹವನ್ನು ಪಠ್ಯದಲ್ಲಿ ಅಳವಡಿಸಲು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  300x250 AD

  ಇದೇ ರೀತಿಯಲ್ಲಿ ಪ್ರಗತಿಪರ ಚಿಂತಕರೆಂದು ಗುರುತಿಸಿಕೊಂಡ ಕೆಲವು ಲೇಖಕರು ತಮ್ಮ ಬರಹಗಳನ್ನು ಹಿಂತೆಗೆದುಕೊಳ್ಳುವ ಕುರಿತಾಗಿ ಪತ್ರ ಬರೆದಿದ್ದು, ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರ ಸೂಚನೆಯ ಮೇರೆಗೆ ತಾನೂ ಸಹ ಪಠ್ಯವನ್ನು ಹಿಂತೆಗೆದುಕೊಳ್ಳಲು ನಿರ್ಧಾರ ಮಾಡಿರುವುದಾಗಿ ಮೂದ್ನಕೂಡು ಚಿನ್ನಸ್ವಾಮಿಯವರು ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  Share This
  300x250 AD
  300x250 AD
  300x250 AD
  Back to top