• Slide
    Slide
    Slide
    previous arrow
    next arrow
  • ಯಶಸ್ವಿಯಾಗಿ ನಡೆದ ಲಯನ್ಸ್ ಕ್ಲಬ್ ಟ್ವಿನ್ನಿಂಗ್ ಕಾರ್ಯಕ್ರಮ

    300x250 AD

    ಶಿರಸಿ: ಶಿರಸಿ ಹಾಗೂ ಸೊರಬ ಲಯನ್ಸ ಕ್ಲಬ್ ಗಳ ಜಂಟಿ ಸೇವಾ ಚಟುವಟಿಕೆ ಕ್ಲಬ್ ಟ್ವಿನ್ನಿಂಗ್ ಕಾರ್ಯಕ್ರಮ ಶಿರಸಿಯ ಲಯನ್ಸ ಸಭಾಭವನದಲ್ಲಿ ಮೇ. 31ರಂದು ನಡೆಯಿತು. ಈ ಎರಡೂ ಕ್ಲಬ್ ಗಳು ಲಯನ್ಸನ ಬೇರೆ ಬೇರೆ ಡಿಸ್ಟ್ರಿಕ್ಟ್ ಗಳಲ್ಲಿ 317 ಬಿ ಹಾಗೂ 317 ಸಿ ಗಳಲ್ಲಿ ಬರುವ ಸಂಘಟನೆಗಳಾಗಿದ್ದು ಸೇರಿ ಕಾರ್ಯಕ್ರಮ ಆಯೋಜಿಸಿದ್ದು ಬಹಳ ಅಪರೂಪದ ಕಾರ್ಯಕ್ರಮವೆನಿಸಿತು.

    ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ ಮಾಜಿ ಗವರ್ನರ್ ಸಹಕಾರ ರತ್ನ ಪುರಸ್ಕೃತ ಎಂ.ಜೆ.ಎಫ್ ಲಯನ್ ಎಚ್.ಎಸ್. ಮಂಜಪ್ಪನವರು ಪಾಲ್ಗೊಂಡು ಮಾತನಾಡಿ ಲಯನ್ಸ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಕಾರ್ಯಚಟುವಟಿಕೆಗಳು, ಅದು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುವ ರೀತಿಯನ್ನು ವಿವರಿಸಿದರು.ಲಯನ್ಸ್ ಜಾಗತಿಕವಾಗಿ ವಿಸ್ತರಿಸಿದ ಬಗೆಯನ್ನು ದೀರ್ಘಕಾಲದಿಂದ ತನ್ನ ಪಾವಿತ್ರ್ಯತೆ ಪಡೆದುಕೊಡು ಬಂದ ಬಗೆಯನ್ನು ತಿಳಿಸಿದರು. ಲಯನ್ಸ ಸದಸ್ಯ ಹೇಗೆ ಸಕ್ರೀಯವಾಗಿ ಸಮಾಜದಲ್ಲಿ ಸೇವಾ ಕಾರ್ಯ ನಡೆಸಬಹುದಾಗಿದೆ ಅದರ ಮೂಲಕ ಸಾರ್ಥಕತೆ ಪಡೆಯಬಹುದು ಎಂಬುದನ್ನು ಸಭೆಗೆ ತಿಳಿಸಿದರು.ಶಿರಸಿ ಹಾಗೂ ಸೊರಬದ ಲಯನ್ಸ ಕ್ಲಬ್ ಗಳ ಅತ್ಯಂತ ಹಳೆಯ ಬಾಂಧವ್ಯದ ನೆನಪುಗಳನ್ನು ಮೆಲುಕು ಹಾಕಿದರು.

    ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್ ಲಯನ್ ಉದಯ ಸ್ವಾದಿಯವರು ಎಲ್ಲರನ್ನೂ ಸ್ವಾಗತಿಸಿದರು. ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಬಸವವನಕಟ್ಟೆ ಹಾಗೂ ಸೊರಬ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ಭಾರತಿ ಹನುಮಂತಪ್ಪ ತಮ್ಮ ಸೇವಾ ಕಾರ್ಯಗಳ ವರದಿ ಮಂಡಿಸಿದರು. ಸೊರಬ ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರತಿಭಾ ಗೋಖಲೆ ತಮ್ಮ ಕ್ಲಬ್ ಸೇವಾ ಚಟುವಟಿಕಗಳನ್ನು ವಿವರಿಸಿ ಶಿರಸಿ ಲಯನ್ಸ್ ಕ್ಲಬ್ ಹಾಗೂ ಶಿರಸಿ ಲಯನ್ಸ ಶಾಲೆಯ ಕಾರ್ಯಚಟುವಟಿಕೆಗಳನ್ನ ಶ್ಲಾಘಿಸಿದರು.ವೇದಿಕೆಯಲ್ಲಿ ಶಿರಸಿ ಲಯನ್ಸ ಕ್ಲಬ್ ಕೋಶಾದ್ಯಕ್ಷರಾದ ಲಯನ್ ಅನಿತಾ ಹೆಗಡೆ, ಸೊರಬ ಲಯನ್ಸ ಕ್ಲಬ್ ಕೋಶಾಧ್ಯಕ್ಷರಾದ ಲಯನ್ ಸವಿತಾ ಭಟ್ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎನ್.ವಿ.ಜಿ.ಭಟ್, ರೀಜನಲ್ ಚೆರ್ ಪರ್ಸನ್ ಲಯನ್ ಪ್ರತಿಮಾ ಉಪಸ್ಥಿತರಿದ್ದರು.

    300x250 AD

    ಸೊರಬ ಲಯನ್ಸ ಕ್ಲಬ್ ತನ್ನ ಸೇವಾಕಾರ್ಯವಾಗಿ ಶಿರಸಿ ಲಯನ್ಸ ಶಾಲೆಯ ಬಂಗಾರದ ಹುಡುಗಿ ಬ್ಯಾಡ್ಮಿಂಟನ್ ವಿಶ್ವಛಾಂಪಿಯನ್ ಪ್ರೇರಣಾ ಶೇಟ್ ಇವಳನ್ನು ಸನ್ಮಾನಿಸಿ, ಬಡ ಮಹಿಳೆಗೆ ಹೊಲಿಗೆ ಯಂತ್ರ ನೀಡಿ, ಶಾಲೆಗೆ ನೋಟ್ ಬುಕ್ ಗಳನ್ನು ದಾನವಾಗಿ ನೀಡಿತು. ಶಿರಸಿ ಲಯನ್ಸ ಕ್ಲಬ್ ಸದಸ್ಯರು ಸೇವಾಕಾರ್ಯವಾಗಿ 3 ವರ್ಷದ ಮಗುವಿನ ಹೃದಯದ ಶಸ್ತ್ರ ಚಿಕಿತ್ಸೆಗಾಗಿ 50000/- ರೂ ಹಾಗೂ ಪದಧಿಕಾರಿಗಳು ಲಯನ್ಸ ಶಾಲೆಯ ಸ್ಮಾರ್ಟ ಕ್ಲಾಸ್ ಗಾಗಿ ರೂ.49500/- ಸಹಾಯಧನ ನೀಡಿದರು.

    ಲಯನ್ ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲಯನ್ ಎಂ.ಆಯ್. ಹೆಗಡೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಲಯನ್ ಶೇಷಗಿರಿ ಹೆಗಡೆಯವರು ತಮ್ಮ ಒಡನಾಡಿ ಮಂಜಪ್ಪನವರ ಕುರಿತಾದ ಬರೆದ ಬರಹವನ್ನು ಲಯನ್ ಕೆ.ಬಿ. ಲೋಕೇಶ ಹೆಗಡೆ ಸಭೆಗೆ ಓದಿ ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top