ದಾಂಡೇಲಿ: ಸೈನಿಕರನ್ನು ಹೊತ್ತು ಸಾಗುತ್ತಿದ್ದ ವಾಹನವೊಂದು ಲಡಾಕಿನಲ್ಲಿ ನದಿಗೆ ಬಿದ್ದು ಅಪಘಾತ ಸಂಭವಿಸಿ 7 ಮಂದಿ ದುರ್ಮರಣಕ್ಕೀಡಾದ ಸೈನಿಕರಿಗೆ ನಗರದ ಬಸವೇಶ್ವರ ನಗರದಲ್ಲಿರುವ ಶ್ರೀಹಾಲೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೇಣದ ದೀಪ ಬೆಳಗಿ, ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ನಗರ ಘಟಕದ ಸಂಯೋಜಕರಾದ ರಾಹುಲ್ ಖರೀಟ್ ಮತ್ತು ಅಕ್ಷಯ್ ಓಝಾ ಹಾಗೂ ಪ್ರಮುಖರಾದ ಆರ್ಯನ್ ಖರೀಟ್, ಉಮೇಶ ದಳವಾಯಿ, ಅಲಿನ್ ಮದರಿ, ವಿವೇಕ್ ಸರ್ವಿರ್, ಸುದೀಪ್ ಹಿರೇಕರ ಮೊದಲಾದವರು ಉಪಸ್ಥಿತರಿದ್ದರು.