• Slide
    Slide
    Slide
    previous arrow
    next arrow
  • ಇ .ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಧ್ಯಾಪಕಿ ಯೂಜಿನ್ ಡಿವಾಜ್ ನಿವೃತ್ತಿ

    300x250 AD

    ದಾಂಡೇಲಿ: 32 ವರ್ಷಗಳಿಂದ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿ, ವಿದ್ಯಾರ್ಥಿಗಳನ್ನು ಭವಿಷ್ಯದ ಆಸ್ತಿಯನ್ನಾಗಿಸಲು ಸಮರ್ಪಣಾಭಾವದಿಂದ ತೊಡಗಿಸಿಕೊಂಡ ಕೆನರಾ ವೆಲ್ಪೇರ್ ಟ್ರಸ್ಟಿನ ಅಧೀನದಲ್ಲಿರುವ ನಗರದ ಇ.ಎಂ.ಎಸ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಯೂಜಿನ್ ಡಿವಾಜ್ ಅವರು ಸೇವಾ ನಿವೃತ್ತಿಗೊಂಡರು.

    ಶಾಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಶೈಕ್ಷಣಿಕ ಹಿರಿಮೆಗೆ ಯೂಜಿನ್ ಡಿವಾಜ್ ಅವರ ಕೊಡುಗೆ ಅಪಾರ. ದೂರದ ಕೇರಳ ರಾಜ್ಯದಲ್ಲಿ ಜನಿಸಿದ ಯೂಜಿನ್ ಡಿವಾಜ್ ಅವರು ತಂದೆಯವರು ಉದ್ಯೋಗವನ್ನರಸಿ ದಾಂಡೇಲಿಗೆ ಬಂದಿರುವುದರಿಂದ ಇಲ್ಲಿಯ ನಿವಾಸಿಯಾಗಿದ್ದಾರೆ. ಇಲ್ಲೆ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದು ಆನಂತರ ಬೆಳಗಾವಿಯ ಸೈಂಟ್ ಜೋಸೆಪ್ ಕಾನ್ವೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಟಿಸಿಎಚ್ ಮಾಡಿ, ಬಳಿಕ ಬಂಗೂರನಗರ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ, ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಎ ಪದವಿ ಶಿಕ್ಷಣವನ್ನು ಪಡೆದರು.

    1980 ರಲ್ಲಿ ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಗೆ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿಕೊಂಡ ಯೂಜಿನ್ ಡಿವಾಜ್ ಅವರು ಖಡಕ್ ಶಿಕ್ಷಕಿಯಾಗಿಯೆ ಗಮನ ಸೆಳೆದವರು. ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಲೆ ಬಿ.ಎಡ್ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಹೀಗೆ ಸೇವೆ ಸಲ್ಲಿಸಿದ ಯೂಜಿನ್ ಡಿವಾಜ್ ಅವರು 2014ರ ನವಂಬರ್ ನಲ್ಲಿ ಇ.ಎಂ.ಎಸ್ ಶಾಲೆಯ ಮುಖ್ಯೋಪಾಧ್ಯಯಿನಿಯಾಗಿ ಪದೋನ್ನತಿಗೊಂಡು ಶಾಲೆಯ ಪ್ರಗತಿಗೆ ಶ್ರಮಿಸಿದರು.

    ಇವರ ಅವಧಿಯಲ್ಲಿ ಶಾಲೆಗೆ ಬಂದ ಬಹುಮಾನಗಳ ಸಂಖ್ಯೆಗೆ ಲೆಕ್ಕವಿಲ್ಲ. ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದವರೆಗೆ ಸಾಧನೆ ಮಾಡಿದ ಹೆಮ್ಮೆ. ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಹಿರಿಮೆ, ಇನ್ನೂ ಶೈಕ್ಷಣಿಕ ವಿಚಾರದಲ್ಲಿಯೂ ಅಗ್ರಮಾನ್ಯ ಸಾಧನೆ, ಹೀಗೆ ಸಾಧನೆಗಳನ್ನು ಹೊತ್ತು ತರುವ ಒಡತಿಯಾಗಿ ಶಾಲೆಯ ಅಭ್ಯುದಯವನ್ನೆ ಬಯಸಿ ಸೇವೆ ಸಲ್ಲಿಸಿದರು.

    300x250 AD

    ಶಿಸ್ತು, ಸಮಯ ಪಾಲನೆ, ಪಾಠ, ಪ್ರವಚನ, ಪಠ್ಯೇತರ ಚಟುವಟಿಕೆಗಳಲ್ಲಿ ಎಂದು ರಾಜಿ ಮಾಡಿಕೊಳ್ಳದ ಯೂಜಿನ್ ಅವರು ತನ್ನ ಕರ್ತವ್ಯಬದ್ಧತೆಯ ಮೂಲಕವೆ ಗಮನ ಸೆಳೆದವರು. ತಾಯಿಯ ವಾತ್ಸಲ್ಯವನ್ನು ನೀಡಿ ವಿದ್ಯಾರ್ಥಿಗಳನ್ನು ಬೆಳೆಸಿದ ರೀತಿ, ಸಹದ್ಯೋಗಿಗಳ ಜೊತೆ ಅನ್ಯೋನ್ಯತೆಯಿಂದ ಇದ್ದು, ಎಲ್ಲರನ್ನು ಸಮಾನವಾಗಿ ಕಂಡು ಶಾಲೆಯ ಪ್ರಗತಿಗಾಗಿ ಶರವೇಗದ ಹೆಜ್ಜೆಯನ್ನಿಟ್ಟವರು.

    ಯೂಜಿನ್ ಡಿವಾಜ್ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅತ್ಯುತ್ತಮ ಶಿಕ್ಷಕಿಯಾಗಿ, ಜಬರ‍್ದಸ್ತ್ ಹೆಡ್ ಮಿಸ್ ಆಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದ ಯೂಜಿನ್ ಅವರು ನಿವೃತ್ತಿಗೊಂಡಿದ್ದಾರೆ .

    ಉತ್ತಮ ಶಿಕ್ಷಕ/ ಶಿಕ್ಷಕಿಯಿಂದ ಉತ್ತಮ ಶಾಲೆಯ ನಿರ್ಮಾಣ ಸಾಧ್ಯ, ಉತ್ತಮ ವಿದ್ಯಾರ್ಥಿಗಳ ನಿರ್ಮಾಣ ಸಾಧ್ಯ. ಇವನ್ನು ಸಾದ್ಯವಾಗಿಸಿದ ಯೂಜಿನ್ ಡಿವಾಜ್ ಅವರು ತನ್ನ ಇಷ್ಟು ವರ್ಷಗಳ ಅನುಪಮ ಸೇವೆಗೆ ಪ್ರೋತ್ಸಾಹ ಮಾರ್ಗದರ್ಶನ ನೀಡಿದ ಕೆನರಾ ವೆಲ್ಪೇರ್ ಟ್ರಸ್ಟಿನ ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳಿಗೆ, ಜನತಾ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಿಗೆ, ಸಹದ್ಯೋಗಿಗಳಿಗೆ, ಬೋಧಕೇತರ ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top