ದಾಂಡೇಲಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 97ಕ್ಕಿಂತಲೂ ಅಧಿಕ ಅಂಕ ಪಡೆದ ಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ 14 ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಮೇಲ್ವಿಚಾರಕ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ‍್ಯಕ್ರಮವನ್ನು ನಗರ ಠಾಣೆಯ ತನಿಖಾ ವಿಭಾಗದ ಪಿಎಸೈ ಯಲ್ಲಪ್ಪ ಎಸ್. ಅವರು ಉದ್ಘಾಟಿಸಿ ನಿರಂತರವಾದ ಪ್ರಯತ್ನ, ಸತತ ಅಧ್ಯಯನಶೀಲ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ ಎಂದು ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ ಅವರು ಅಭಿನಂದಿಸಿ ಮಾತನಾಡಿದರು. ಶೇ 97ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಚೈತನ್ಯ ಮಹಾಜನ್, ಅಪೇಕ್ಷಾ ಪಡವಳಕರ, ಖುಷಿ ಪಾಟೀಲ, ತೇಜಸ್ ನಾಯ್ಕ, ಸುಸೇನ್ ಭಂಗಾರಿ, ಮಾನಸ ವಾಸರೆ, ಭಕ್ತಿ.ಬಿ.ನಾಯ್ಕ, ಕಮಲಾ ಹಲ್ಲುರ್, ಕವನಾ ಎಂ.ಶೆಟ್ಟಿ, ಆದಿತ್ಯ ಹಂದಿಗೊಳ್, ಕೀರ್ತಿ ಗುಂಡುಪ್ಕರ್, ಸಬಾ ರ‍್ವರ್, ಆದಿತ್ಯ ಸೋಮಕುಮಾರ್ ಮತ್ತು ವೈಭವ್ ಹಾಗೂ ಶಾಲಾ ಮುಖ್ಯೋಪಾಧ್ಯಯಿನಿ ಸೆಲ್ವಿಯವರನ್ನು ಸನ್ಮಾನಿಸಲಾಯ್ತು.
ಶಾಲಾಭಿವೃದ್ಧಿ ಮೇಲ್ವಿಚಾರಕ ಸಮಿತಿಯ ಪ್ರಮುಖರುಗಳಾದ ಗುರು ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾಜ್ ಶೇಖ ಸ್ವಾಗತಿಸಿದರು. ಅನುಪಮ ಶೆಟ್ಟಿ ವಂದಿಸಿದರು. ರೇಷ್ಮಾ ಕುಮಾರ್ ನಿರೂಪಿಸಿದರು.