ಯಲ್ಲಾಪುರ:ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನನ್ನ ಕ್ಯಾಂಪಸ್, ಸ್ವಚ್ಛ ಕ್ಯಾಂಪಸ್’ ಕಾರ್ಯಕ್ರಮ ಮಂಗಳವಾರ ನಡೆಯಿತು. ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾಲೇಜು ಆವಾರ, ತರಗತಿ ಕೋಣೆ ಹಾಗೂ ಗ್ರಂಥಾಲಯಗಳನ್ನು ಸ್ವಚ್ಛಗೊಳಿಸಿದರು.
ಪ್ರಭಾರಿ ಪ್ರಾಂಶುಪಾಲ ಡಿ.ಎಸ್.ಭಟ್ಟ, ಸ್ಕೌಟ್ ಮತ್ತು ಗೈಡ್ಸ್ ಸಂಚಾಲಕ ಡಿ.ಜಿ.ತಾಪಸ್, ಎನ್.ಎಸ್.ಎಸ್ ಕಾರ್ಯಕ್ರಮದಾಧಿಕಾರಿ ರಾಮಕೃಷ್ಣ ಗೌಡ, ಉಪನ್ಯಾಸಕರಾದ ಸವಿತಾ ನಾಯ್ಕ, ಸುರೇಖಾ ತಡವಲ, ಮಹೇಂದ್ರ ಗಡ್ಕರ್, ಕಾವೇರಿ ಮರಾಠಿ ಇತರರಿದ್ದರು.