ಯಲ್ಲಾಪುರ: ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ತಂಬಾಕು ರಹಿತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯಕೇಂದ್ರದ ಸಭಾಭವನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಕಂದಾಯ ಇಲಾಖೆ,ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವ ಜನತೆ ದುಶ್ಚಟಗಳಿಗೆ ಒಳಗಾಗುಕಿ ಝಿನತ್ ಭಾನು ಶೇಖ್ ಮಾತನಾಡಿ,”ಎಲ್ಲವನ್ನು ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ.ಬದಲಾಗಿ ವ್ಯಕ್ತಿಯ ವಯಕ್ತಿಕ ಮನೋಭಾವುದನ್ನು ತಪ್ಪಿಸಲು ಶ್ರಮಿಸಬೇಕೆಂದರು.
ಸಹಾಯಕ ಸರಕಾರಿ ಅಭಿಯೋಜವದಲ್ಲಿ ಬದಲಾದಲ್ಲಿ ದುಶ್ಚಟಗಳಿಂದ ಮುಕ್ತವಾಗಲು ಸಾಧ್ಯ” ಎಂದರು.
ತಂಬಾಕು ಸೇವನೆಯ ದುಷ್ಪರಿಣಾಮ ಕುರಿತು ಡಾ.ಸೌಮ್ಯ ಕೆ.ವಿ ಉಪನ್ಯಾಸ ನೀಡಿದರು.ವಕೀಲ ಸಂಘದ ಅಧ್ಯಕ್ಷ ಆರ್.ಕೆ.ಭಟ್ಟ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ತಾಕೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಅಧ್ಯಕ್ಷತೆ ವಹಿಸಿದ್ದರು.ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಸ್ವಾಗತಿಸಿ ನಿರೂಪಿಸಿದರು.ಶಿಕ್ಷಕ ಸುಧಾಕರ ನಾಯಕ ವಂದಿಸಿದರು.