• first
    second
    third
    previous arrow
    next arrow
  • ಪ್ರವಾಹದಲ್ಲಿ ಸಿಲುಕಿದ ಗರ್ಭಿಣಿ; ಬೋಟ್ ಮೂಲಕ ಆಸ್ಪತ್ರೆ ತಲುಪಿಸಿದ ಗ್ರಾಮಸ್ಥರು

    300x250 AD

    ದಾಂಡೇಲಿ: ನಿರಂತರ ಮಳೆಯಿಂದಾಗಿ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಗರ್ಭಿಣಿಯನ್ನು ಬೋಟ್ ಮೂಲಕ ಸುರಕ್ಷಿತವಾಗಿ ಆಸ್ಪತ್ರೆಗೆ ರವಾನಿಸಿದ ಘಟನೆ ನಡೆದಿದೆ
    ಇಲ್ಲಿನ ಮೌಳಂಗಿಯ ಭೂಮಿಕಾ ಕಾಂಬ್ಳೆ ಎನ್ನುವವರಿಗೆ ಪ್ರವಾಹದಲ್ಲಿ ಸಿಲುಕಿದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸುತ್ತಲೂ ಜಲಾವೃತಗೊಂಡು ಮಹಿಳೆ ಕಷ್ಟಕ್ಕೆ ಸಿಲುಕಿದ್ದರು‌ ಈ ಸಂದರ್ಭದಲ್ಲಿ ಕಾರ್ಯಪ್ರವೃತ್ತವಾದ ಗ್ರಾಮಸ್ಥರು ಹಾಗೂ ಯುವಕರ ತಂಡ ಮಹಿಳೆಯ ರಕ್ಷಣೆಗೆ ಧಾವಿಸಿದರು.
    ಮಳೆಯಿಂದಾಗಿ ಮೌಳಂಗಿ ರಸ್ತೆ ಜಲಾವೃತಗೊಂಡಿದ್ದರಿಂದ ಸಂಚಾರ ಬಂದ್ ಆಗಿತ್ತು‌. ಗ್ರಾಮಸ್ಥರು ಹಾಗು ಯುವಕರು ಸೇರಿ ಮೌಳಂಗಿ ಇಕೋ ಪಾರ್ಕ್ ನ ಟ್ಯೂಬ್ ಬೋಟ್ ತರಿಸಿ ಅದರ ಸಹಾಯದಿಂದ ಗರ್ಭಿಣಿಯನ್ನು ನೆರೆಯಿಂದ ಪಾರು ಮಾಡಿ ಕಾರಿನ ಮೂಲಕ ದಾಂಡೇಲಿ ಸರಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Back to top