ಯಲ್ಲಾಪುರ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಸಾಮಾನ್ಯ ವ್ಯಕ್ತಿಯೊಬ್ಬರ ಮಗಳ ಮದುವೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿ ಅಚ್ಚರಿ ಮೂಡಿಸಿದರು.
ಮೂಲ ಮುಂಡಗೋಡ, ಹಾಲಿ ಯಲ್ಲಾಪುರ ನಿವಾಸಿಯಾಗಿರುವ ವಾಚ್ ಮೇಕರ್ ಜುಲ್ಫಿಕರ್ ಸೋನಾರ್ ಹಾಗೂ ಆಯೇಶಾ ದಂಪತಿ ಪುತ್ರಿ ಮೆಹರಿನ್ ಹಾಗೂ ಅಬ್ದುಲ್ ಪುತ್ರ ತನ್ವೀರ್ ಮದುವೆ ಭಾನುವಾರ ಪಟ್ಟಣ ವ್ಯಾಪ್ತಿಯ ನಿಸರ್ಗ ಮನೆಯಲ್ಲಿ ನಡೆಯಿತು. ಜುಲ್ಫಿಕರ್ ಸೋನಾರ್ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮಿತ್ರರಿಗೆ, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ಎಲ್ಲರಿಗೂ ಕೂಡ ಮದುವೆಗೆ ಆಹ್ವಾನಿಸಿದ್ದರು.
ವಾಚ್ ರಿಪೇರಿ ಮಾಡಿ ಚಿಕ್ಕ ಫಾಸ್ಟ್ಫುಡ್ ಅಂಗಡಿ ನಡೆಸುವ ಜುಲ್ಫಿಕರ್ ಸೋನಾರ್ ಪುತ್ರಿಯ ವಿವಾಹಕ್ಕೆ ಆಮಂತ್ರಿಸುವುದೇ ಬಹಳ ಕಷ್ಟ. ಆದರೂ ಕೂಡ ಜುಲ್ಫಿಕರ್ ಸೋನಾರ್ ಎಲ್ಲರನ್ನೂ ಆಮಂತ್ರಿಸಿದ್ದು, ಅದರಲ್ಲಿ ಬಹುತೇಕ ಎಲ್ಲ ಪಕ್ಷ ಜಾತಿ ಧರ್ಮದ ಜನ ಮದುವೆಗೆ ಬಂದು ವಧು-ವರರನ್ನು ಹರಿಸಿದ್ದಾರೆ.
ಬಿಜೆಪಿಯ ವಾಕರಸಾಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲ, ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬಿಜೆಪಿ ಪ್ರಮುಖೆ ಶಾಮಲಿ ಪಾಟಣಕರ, ಜಿಲ್ಲಾ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಕಲ್ಪನಾ ನಾಯ್ಕ, ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ, ಪ.ಪಂ ಸದಸ್ಯೆ ಕಾಂಗ್ರೆಸ್‌ನ ನರ್ಮದಾ ನಾಯ್ಕ, ಪ.ಪಂ ಸದಸ್ಯ ಕಾಂಗ್ರೆಸ್ ನ ಸಯ್ಯದ ಕೇಸರಲಿ, ಬಿಜೆಪಿ ಅಲ್ಪ ಸಂಖ್ಯಾತ ತಾಲೂಕಾ ಅಧ್ಯಕ್ಷ ಬಾಬಾ ಸಾಬ ಆಲನ್, ಪ.ಪಂ ಮಾಜಿ ಅಧ್ಯಕ್ಷ ಕಾಂಗ್ರೆಸ್ ನ ಎಂ.ಡಿ.ಮುಲ್ಲಾ, ಪ.ಪಂ ಮಾಜಿ ಸದಸ್ಯ ಬಿಜೆಪಿಯ ಗಜಾನನ ನಾಯ್ಕ ಸೇರಿದಂತೆ ಅನೇಕ ಮಹನಿಯರು ಭಾಗವಹಿಸಿದ್ದರು.