ದಾಂಡೇಲಿ: ಅನಾರೋಗ್ಯ ಪೀಡಿತ ರಾಟ್ ವೀಲರ್ ನಾಯಿಯೊಂದನ್ನು ತಾಲ್ಲೂಕಿನ ತಾಟಗೇರಾ ಗ್ರಾಮದಲ್ಲಿ ಬಿಟ್ಟು ಹೋಗಿರುವುದನ್ನು ಕಂಡ ರೈತ ಆನಂದ ಸಿಂಗ್ ರಜಪೂತ ಅವರು ಚಿಕಿತ್ಸೆ ನೀಡಿ, ಗುಣಮುಖವನ್ನಾಗಿಸಿ ಮಾನವೀಯತೆಯನ್ನು ಮರೆದಿದ್ದರು.
ಈ ನಡುವೆ ಅವರು ರೈತನಾಗಿರುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡ ನಾಯಿಯನ್ನು ಅದಕ್ಕೆ ಅದರದ್ದೇ ಆದ ಆಹಾರವನ್ನು ಖರೀದಿಸಿ ನೀಡಲು ಕಷ್ಟಸಾಧ್ಯವಾಗಿರುವ ಹಿನ್ನಲೆಯಲ್ಲಿ, ನಾಯಿಯ ಮೂಲ ವಾರಸುದಾರರ ಅನುಮತಿಯನ್ನು ಪಡೆದು ಸೋಮವಾರ ಬೈಲುಪಾರು ನಿವಾಸಿ ಹಾಗೂ ಶ್ವಾನಪ್ರಿಯ ಸುರೇಶ ರುದ್ರಪಾಟಿಯವರಿಗೆ ಒಪ್ಪಿಸಿದ್ದಾರೆ.