
ಸಿದ್ದಾಪುರ: ವರುಣಾರ್ಭಟದಿಂದ ತಾಲೂಕಿನ ಮಾಣಿಹೊಳೆ(ಅಘನಾಶಿನಿ) ತುಂಬಿ ಹರಿಯುತ್ತಿದ್ದು ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾರ ಹಾನಿಯುಂಟಾಗಿದೆ. ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕರ್ಜಗಿಯ ನಿವಾಸಿ ಮಹಾಬಲೇಶ್ವರ ಗೌಡ ಅವರ ಮನೆ ಮಾಣಿಹೊಳೆಯ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಕುಟುಂಬಸ್ಥರು ನಿರ್ಗತಿಕರಾಗಿದ್ದಾರೆ. ಬಡ ಕೃಷಿಕುಟುಂಬದವರಾದ ಅವರ ಬಳಿ ಉಟ್ಟಬಟ್ಟೆಯನ್ನು ಬಿಟ್ಟರೆ ಉಳಿದೆಲ್ಲವೂ ನದಿಯಪಾಲಾಗಿ ದಿಕ್ಕೊತೋಚದಂತಾಗಿದೆ. ಆದ್ದರಿಂದ ಸರ್ಕಾರ, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಸಂಘಸಂಸ್ಥೆಗಳು, ದಾನಿಗಳು ಪರಿಹಾರ ನೀಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯ ನೀಡಬೇಕೆಂದು ವಿನಂತಿಸಿಕೊಳ್ಳಲಾಗಿದೆ