ಮುಂಡಗೋಡ: ಸಾಲ ಬಾಧೆ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಪ್ಪ (ಇಂದೂರ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚನ್ನಪ್ಪ ಶ್ಯಾಬಾಳ ಮೃತ ರೈತ. ಬೆಳೆ ಬೆಳೆಯಲು ತನ್ನ ತಂದೆ- ತಾಯಿ ಹೆಸರಿನಲ್ಲಿ ಸಹಕಾರಿ ಸಂಘಗಳಲ್ಲಿ 6 ಲಕ್ಷ 41 ಸಾವಿರ ರೂ. ಸಾಲ ಮಾಡಿದ್ದು, ಬೆಳೆದ ಬೆಳೆ ಸರಿಯಾಗಿ ಫಲ ನೀಡಿರಲಿಲ್ಲ. ಇದರಿಂದ ಮಾಡಿದ ಸಾಲ ತೀರಿಸಲು ಆಗುವುದಿಲ್ಲವೆಂದು ಮನಸ್ಸಿಗೆ ಹಚ್ಚಿಕೊಂಡು ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಈತ ಸೋಮವಾರ ಮೃತಪಟ್ಟಿದ್ದಾನೆ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.