ಕಾರವಾರ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಿಮ್ಹಾನ್ಸ್, ಕಾರವಾರ ಯುವ ಸ್ಪಂದನ ಕೇಂದ್ರ ಹಾಗೂ ಶಿರಸಿ ತಾಲೂಕಿನ ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಯುವಸ್ಪಂದನ ಸೇವೆ ಮತ್ತು ಜೀವನ ಕೌಶಲ್ಯ ಕುರಿತು ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಯುವಪರಿವರ್ತಕ ಸ್ಟೀವನ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಪ್ರಸುತ್ತ ಯುವಜನತೆಯ ಗೊಂದಲ ಮತ್ತು ಸಮಸ್ಯೆಗಳಿಗೆ ಮಾರ್ಗದರ್ಶನದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ರಾಜ್ಯದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಸ್ಪಂದನದ ಕಾರ್ಯಕ್ರಮವನ್ನು ತಂದು ಯುವಜನತೆಗೆ ಆರೋಗ್ಯ ಜೀವನ ಶೈಲಿ, ಸುರಕ್ಷತೆ ಸಂಬಂಧಗಳು ಮತ್ತು ವೃತ್ತಿ ಮಾರ್ಗದರ್ಶನಗಳ ಕುರಿತಾಗಿ ಯುವಜನತೆಗೆ ಉಚಿತವಾಗಿ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ತಿಳಿಸಿದರು.
ಯುವಜನರು ಎಸ್‌ಎಸ್‌ಎಲ್‌ಸಿ ನಂತರ ಪಿಯು ಮತ್ತು ಪದವಿ ನಂತರ ಮುಂದೇನು? ಎಂಬ ಗೊಂದಲದಲ್ಲಿ ಇರುವುದನ್ನು ಗಮನಿಸಿ ಯುವಸ್ಪಂದನ ಕೇಂದ್ರಕ್ಕೆ ಕರೆ ಮಾಡಿ ಎಂದು ಮಾಹಿತಿ ನೀಡಲಾಯಿತು. ಯುವಜನ ಸಂಬಂಧಿ ಕಾರ್ಯಕ್ರಮವಾದ ಯುವಸ್ಪಂದನ ಕೇಂದ್ರದಿಂದ ದೊರೆಯುವ ಸೌಲಭ್ಯಗಳ ಕುರಿತಾಗಿ ಅರಿವು ಮೂಡಿಸಿ, ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಯುವಸ್ವಂದನ ಕೇಂದ್ರಕ್ಕೆ ಭೇಟಿ ನೀಡಿ ಎಂದರು.
ಹೆಚ್ಚಿನ ಮಾಹಿತಿಗಾಗಿ ಯುವಸ್ಪಂದನ ಕೇಂದ್ರದ ದೂರವಾಣಿ ಸಂಖ್ಯೆ: 08382- 222 332 ಹಾಗೂ ಸಹಾಯವಾಣಿ 155265ಗೆ ಕರೆ ಮಾಡಿ ಯುವಸ್ಪಂದನ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಸೌಮ್ಯ ಎಸ್.ಬಿ., ಆಶಾ ಕಾರ್ಯೆಕರ್ತೆಯರು ಹಾಗೂ ಇನ್ನಿತರರು ಇದ್ದರು.