ಕಾರವಾರ: ಕಳೆದ ಮಾರ್ಚ್- ಏಪ್ರಿಲ್‌ನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಬಿ.ಕಾಂ 5ನೇ ಸೆಮಿಸ್ಟರ್ ಫಲಿತಾಂಶವು ಪ್ರಕಟವಾಗಿದ್ದು, ಕೆನರಾ ವೆಲ್‌ಫೇರ್ ಟ್ರಸ್ಟಿನ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶವು ಶೇಕಡಾ 100ಕ್ಕೆ 100 ದಾಖಲಾಗಿದೆ.
ನೂರು ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 83 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, ಪ್ರಥಮ ಶ್ರೇಣಿಯಲ್ಲಿ 16 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರನಾಳಿ ಕಾಂಬಳೆ 671 (95.86%) ಅಂಕ ಪಡೆದು ಕಾಲೇಜಿಗೆ ಪ್ರಥಮ, ಲೋಚನ್ ಶಿರೋಡ್ಕರ ಹಾಗೂ ಸೋನಾಲಿ ಎಸ್.ಸಾವಕಾರ 659 (94.14%) ದ್ವಿತೀಯ ಸ್ಥಾನ ಹಾಗೂ ಭಾಗ್ಯ ಎಂ.ಗಾಂವಕರ 642 (91.71%) ತೃತೀಯ ಸ್ಥಾನ, ಮಾಹಿಲ್ ಎನ್.ಕುಮಾರೇಶ 640 (91.43%) ನಾಲ್ಕನೇ ಸ್ಥಾನ ಹಾಗೂ ಪ್ರಿಯಾ ಪಿ.ಶೆಟ್ಟಿ 631 (90.14%) ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್‌ಕಮ್ ಟ್ಯಾಕ್ಸ್ ವಿಷಯದಲ್ಲಿ 6 ವಿದ್ಯಾರ್ಥಿಗಳು, ಕಾಸ್ಟ್ ಅಕೌಂಟೀಂಗ್ ವಿಷಯದಲ್ಲಿ 11 ವಿದ್ಯಾರ್ಥಿಗಳು, ಅಕೌಂಟಿಂಗ್ ಥೇರಿಯದಲ್ಲಿ ಓರ್ವ, ಫೈನಾನ್ಶಿಯಲ್ ಸರ್ವಿಸ್‌ನಲ್ಲಿ ಓರ್ವ ಹಾಗೂ ಪ್ರಿನ್ಸಿಪಲ್ಸ್ ಆಫ್ ಅಡಿಟಿಂಗ್‌ನಲ್ಲಿ ಓರ್ವ ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಬೇರೆ ಬೇರೆ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಟ್ರಸ್ಟಿನ ಅಧ್ಯಕ್ಷ ಎಸ್.ಪಿ.ಕಾಮತ್, ಕಾರ್ಯದರ್ಶಿ ಹಾಗೂ ಧರ್ಮದರ್ಶಿ ಕೆ.ವಿ.ಶೆಟ್ಟಿ, ಪ್ರಾಚಾರ್ಯರಾದ ಡಾ.ಕೇಶವ ಕೆ.ಜಿ., ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.