ಯಲ್ಲಾಪುರ; ಪಟ್ಟಣದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು,ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಆಶ್ರಯದಲ್ಲಿ ಸೋಮವಾರ ಪಟ್ಟಣದ ಅಡಿಕೆ ಭವನದಲ್ಲಿ ಬ್ಯಾಂಕರ್ಸ,ಸೊಸೈಟಿ,ಹಾಗೂ ಜ್ಯುವೆಲರ್ಸ ಮಾಲಕರ ಸುರಕ್ಷತೆಯ ಜಾಗೃತಿಯ ಸಭೆ ನಡೆಯಿತು.
ಸಿಪಿಐ ಸುರೇಶ ಯಳ್ಳೂರು ಮಾತನಾಡಿ, “ಬ್ಯಾಂಕುಗಳು,ಸೊಸೈಟಿಗಳು,ಜುವೆಲರಿ ಶಾಪ್ ಗಳಲ್ಲಿ ಸುರಕ್ಷತೆಯ ದೃಷ್ಠಿಯಿಂದ ಗುಣಮಟ್ಟದ ಸಿ.ಸಿ.ಕ್ಯಾಮರಾ ಅಳವಡಿಸಿದಲ್ಲಿ ಅಪರಾಧ ಪ್ರಕರಣವನ್ನು ತಕ್ಷಣ ಭೇದಿಸಲು ಸಾಧ್ಯ.ವಿಕಾಸ ಬ್ಯಾಂಕ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಎಸ್ ಬಿಐ ಕಳ್ಳತನದಲ್ಲಿ ಆರೋಪಿಯನ್ನು ಶೀಘ್ರವಾಗಿ ಬಂಧಿಸುವಲ್ಲಿ ಸುಲಭವಾಯಿತು.ಕಳ್ಳತನ ಘಟನೆ ಮರುಕಳಿಸಿದಲ್ಲಿ ಬ್ಯಾಂಕು,ಅಂಗಡಿಗಳ ಸುರಕ್ಷತಾ ವೈಪಲ್ಯ ಕಾರಣವಾಗುತ್ತದೆ.ಪೋಲಿಸರ ಕಾರಣಕ್ಕೆ ಕ್ಯಾಮರಾ ಅಳವಡಿಸುವುದು ಬೇಡ.ಗ್ರಾಹಕರ ಹಾಗೂ ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸುರಕ್ಷತಾಕ್ರಮ ಅನುಸರಿಸಿ”ಎಂದು ಎಚ್ಚರಿಸಿದರು.
ಗುಣಮಟ್ಟದ ಸಿ.ಸಿ.ಕ್ಯಾಮರ ಅಳವಡಿಸಿ,ಅಪರಾಧ ಪ್ರಕರಣ ಭೇದಿಸಲು ನೆರವಾದ ವಿಕಾಸ ಬ್ಯಾಂಕನ ಅಧ್ಯಕ್ಷ ಮುರಳಿ ಹೆಗಡೆ,ವ್ಯವಸ್ಥಾಪಕ ಉಮೇಶ ಭಾಗ್ವತ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿಕಾಸ ಬ್ಯಾಂಕ ಅಧ್ಯಕ್ಷ ಮುರಳಿ ಹೆಗಡೆ ಮಾತನಾಡಿ,”ಗುಣಮಟ್ಟದ ಕ್ಯಾಮರಾ ಅಳವಡಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ.ಕಳ್ಳತನ ಆದಾಗ ಪೋಲಿಸರನ್ನು ದೂಷಿಸುವುದು ಸರಿಯಲ್ಲ”ಎಂದರು.ಸಿಸಿ ಕ್ಯಾಮರಾ ತಂತ್ರಜ್ಞ ಹಸನ್ ಮುಲ್ಲಾ ಹುಬ್ಬಳ್ಳಿ ಸಿ.ಸಿ.ಕಾಮರಾ ಅಳವಡಿಕೆ,ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.
ಪಿ.ಎಸೈ ಮಂಜುನಾಥ ಗೌಡರ್ ಉಪಸ್ಥಿತರಿದ್ದರು.ಪೊಲೀಸ್ ಸಿಬ್ಬಂದಿಗಳಾದ ಸೀಮಾ ಗೌಡ ಸ್ವಾಗತಿಸಿದರು.ನಾಗಪ್ಪ ಲಮಾಣಿ ನಿರೂಪಿಸಿದರು.