ಬೆಂಗಳೂರು; ವಿಶ್ವ ಬ್ಯಾಡ್ಮಿಂಟನ್ ಜೂನಿಯರ್ ವಿಭಾಗದಲ್ಲಿ ಬಂಗಾರದ ಸಾಧಕಿ ಶಿರಸಿ ಲಯನ್ಸ ಶಾಲೆಯ ಪ್ರೇರಣಾ ಶೇಟ್ ಇವಳಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಲಯನ್ಸ ಮಲ್ಟಿಪಲ್ ಡಿಸ್ಟಿಕ್ಟ್ ಕನ್ವೆನ್ಶನ್ ಕಾರ್ಯಕ್ರಮದಲ್ಲಿ ಕ್ರೀಡಾ ಸಲಕರಣೆಗಳನ್ನು ವಿತರಿಸುವದರೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಲಯನ್ಸ ಮಾಜಿ ಗವರ್ನರ್ ಪಿ.ಡಿ.ಜೆ.ಎಫ್ ರವಿ ಹೆಗಡೆ ಹೂವಿನ್ಮನೆ ಈ ಸಂದರ್ಭದಲ್ಲಿ ಪ್ರೇರಣಾಳನ್ನು ಸಭೆಗೆ ಪರಿಚಯಿಸಿದರು. ಶಿರಸಿ ಲಯನ್ಸ ಕ್ಲಬ್ ಪರವಾಗಿ ಲಯನ್ ಅಶೋಕ ಹೆಗಡೆ ಪ್ರೇರಣಾಳನ್ನು ವೇದಿಕೆಗೆ ಬರಮಾಡಿಕೊಂಡರು. ಲಯನ್ಸ ಅಂತರ ರಾಜ್ಯ ನಿರ್ದೇಶಕರುಗಳು ಪ್ರೇರಣಾಳ ಸಾಧನೆಯನ್ನು ಪ್ರಶಂಸಿದರು. ಪ್ರೇರಣಾ ತಂದೆ ನಂದಕುಮಾರ ಶೇಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.